ಪುಂಜಾಲಕಟ್ಟೆ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಪುಂಜಾಲಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾಯೋಜನೆ ಘಟಕ 1 ಮತ್ತು 2 ಇದರ ಆಶ್ರಯದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಗುರುವಾರ 'ಕಂಡಡ್ ಒಂಜಿ ದಿನ' ಈ ಕಾರ್ಯಕ್ರಮವನ್ನು ಕೊಯ್ಯೂರು ಸಮೀಪದ ಬೈದಂಕೊಡಿಯಲ್ಲಿ ಒಂದು ದಿನದ ಶಿಬಿರವನ್ನು ಆಯೋಜಿಸಲಾಗಿತ್ತು. ನೇಜಿ ನೆಡುವಾಗ ಹಾಡುವ ಪಾಡ್ದನಗಳ ಮೂಲಕ ಸ್ವಯಂಸೇವಕರು ಹಿರಿಯ ರೈತಾಪಿ ಜನರೊಂದಿಗೆ ಬೆರೆತು ನೇಜಿ ನೆಟ್ಟರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ, ಈ ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಗಳಾದ ರಾಜೇಶ್ವರಿ ಎಚ್ಎಸ್ ಹಾಗೂ ಸಂತೋಷ್ ಪ್ರಭು ಎಂ, ಐಕ್ಯೂಎಸಿ ಸಂಚಾಲಕರಾದ ಡಾ. ಲೋಕೇಶ ಕಾಲೇಜಿನ ಪ್ರಾಧ್ಯಾಪಕರಾದ ಆಂಜನೇಯ ಎಂ.ಎನ್ ಮತ್ತು ಶೇಖರ ಕೆ ಇವರು ಭಾಗವಹಿಸಿದ್ದರು.
إرسال تعليق