ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೌತ್ ಕೆನರಾ ಗವರ್ನ್‌ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕಿನ ಮಹಾಸಭೆ: ಸಾಲದ ಮೇಲಿನ ಬಡ್ಡಿದರ ಕಡಿತಕ್ಕೆ ನಿರ್ಧಾರ

ಸೌತ್ ಕೆನರಾ ಗವರ್ನ್‌ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕಿನ ಮಹಾಸಭೆ: ಸಾಲದ ಮೇಲಿನ ಬಡ್ಡಿದರ ಕಡಿತಕ್ಕೆ ನಿರ್ಧಾರ


ಮಂಗಳೂರು: ನೂರು ವರ್ಷಗಳನ್ನು ಪೂರೈಸಿ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ಸೌತ್ ಕೆನರಾ ಗವರ್ನ್ ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್; ಡೊಂಗರಕೇರಿ; ಮಂಗಳೂರು ಇದರ ವರ್ಚುವಲ್ ಮಹಾಸಭೆಯು ಭಾನುವಾರ (ಡಿ.19) ಬ್ಯಾಂಕಿನ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.


ರಾಜ್ಯದ ವೇತನದಾರರ ಸಹಕಾರಿ ಬ್ಯಾಂಕುಗಳ ಪೈಕಿ ಅಗ್ರಸ್ಥಾನದಲ್ಲಿರುವ ಬ್ಯಾಂಕ್ 2020-21ನೇ ಸಾಲಿನಲ್ಲಿ 116 ಕೋಟಿ ವ್ಯವಹಾರ ನಡೆಸಿದ್ದು 58.6 ಲಕ್ಷ ಒಟ್ಟು ಲಾಭ ಗಳಿಸಿದೆ. 21.63 ಲಕ್ಷ ಆದಾಯ ತೆರಿಗೆ ಪಾವತಿಸಿ 36.96 ಲಕ್ಷ ನಿವ್ವಳ ಲಾಭ ಗಳಿಸಿದೆ. 

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಬ್ಯಾಂಕಿನ ಸದಸ್ಯರು ಬಹುತೇಕ ಮಧ್ಯಮ ವರ್ಗದ ಸರಕಾರಿ ನೌಕರರಾಗಿದ್ದು ತಮ್ಮ ವೈಯಕ್ತಿಕ ಖರ್ಚುಗಳಿಗೆ; ಮಕ್ಕಳ ವಿದ್ಯಾಭ್ಯಾಸಕ್ಕೆ; ಗೃಹೋಪಯೋಗಿ ವಸ್ತುಗಳ ಖರೀದಿಗೆ ಬ್ಯಾಂಕ್‌ನಿ೦ದ ಸಾಲ ಪಡೆಯುತ್ತಿದ್ದಾರೆ. ಅವರ ಆರ್ಥಿಕ ಸಂಕಷ್ಟವನ್ನು ದೂರ ಮಾಡುವ ಸಲುವಾಗಿ ಸದಸ್ಯರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವಿವಿಧ ರೀತಿಯ ಸಾಲಗಳನ್ನು ನೀಡುತ್ತಿದ್ದು ಸಾಲದ ಬಡ್ಡಿ ದರ ಕನಿಷ್ಠ 8.15% ಆಗಿದ್ದು ಗರಿಷ್ಠ 9.65% ಆಗಿರುತ್ತದೆ.   ಗಳಿಸಿದ ಲಾಭದ ಮೇಲೆ ಆದಾಯ ತೆರಿಗೆ ಪಾವತಿಸಬೇಕಾಗಿರು ವುದನ್ನು ಮನಗಂಡು ಸದಸ್ಯರಿಗೆ ನೇರ ಲಾಭ ದೊರಕುವ ನಿಟ್ಟಿನಲ್ಲಿ ಸಾಲದ ಮೇಲಿನ ಬಡ್ಡಿಯನ್ನು ಹಂತಹಂತವಾಗಿ ಕಡಿತಗೊಳಿಸುವುದು ಆಡಳಿತ ಮಂಡಳಿಯ ಉದ್ದೇಶವಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಪ್ರಸಕ್ತ ವರ್ಷ 8% ಡಿವಿಡೆಂಡ್ ಘೋಷಿಸಲಾಗಿದೆ. 


ಸದಸ್ಯರು ತೊಡಗಿಸಿದ 5 ಲಕ್ಷಗಳ ವರೆಗಿನ ಠೇವಣಿಗೆ DI&CGC ವಿಮಾ ಭದ್ರತೆಯನ್ನು ಪಡೆಯಲಾಗಿದೆ. 7 ಲಕ್ಷದ ವರೆಗೆ ವೈಯಕ್ತಿಕ ಸಾಲ; 30 ಲಕ್ಷದ ವರೆಗೆ ಗೃಹ ಸಾಲ; 5 ಲಕ್ಷದ ವರೆಗೆ ಚಿನ್ನಾಭರಣಗಳ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತದೆ. ಪ್ರತಿ ವರ್ಷ ಪ್ರತಿಭಾ ಪುರಸ್ಕಾರ; ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸದಸ್ಯರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಗುತ್ತದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.


ವರ್ಚುವಲ್ ಸಭೆಯ ವೇದಿಕೆಯಲ್ಲಿ ನಿರ್ದೇಶಕರುಗಳಾದ ತಿಲೋತ್ತಮ; ಸುಜಾತಾ; ಪದ್ಮನಾಭ ಜೋಗಿ; ಶಶಿಕಲಾ; ಶಿವಾನಂದ ಎ೦.;ಅಕ್ಷಯ್  ಭಂಡಾರ್ ಕಾರ್; ಎ.ಫ್ರಾಂಕಿ ಕುಟಿನ್ಹಾ; ಪ್ರದೀಪ್ ಡಿಸೋಜ; ಎಸ್. ನಿರಂಜನಮೂರ್ತಿ; ಜಗದೀಶ್ ಮತ್ತು ಶಮಂತ್ ಕುಮಾರ್ ಉಪಸ್ಥಿತರಿದ್ದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಶ ಎನ್. ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم