ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಸಿನಿಮಾದಿಂದ ಮಾದಪ್ಪನ ಹಾಡು ತೆಗೆಯಿರಿ': ಸಾಲೂರು ಮಠದ ಸ್ವಾಮೀಜಿ ಆಗ್ರಹ

'ಸಿನಿಮಾದಿಂದ ಮಾದಪ್ಪನ ಹಾಡು ತೆಗೆಯಿರಿ': ಸಾಲೂರು ಮಠದ ಸ್ವಾಮೀಜಿ ಆಗ್ರಹ




ಮೊನ್ನೆ ತಾನೇ ಕನ್ನಡದಲ್ಲಿ ಹೊಸ ಅಲೆಯನ್ನು ಸೃಷ್ಠಿಸಿದ "ಗರುಡ ಗಮನ ವೃಷಭ ವಾಹನ " ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆದ್ದಿತ್ತು. ಆದರೆ ಅದೇ ಸಿನಿಮಾ ಈಗ  ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲಿ ಸಿನಿಮಾದ ನಿರ್ದೇಶಕ, ಶಿವನ ಪಾತ್ರ ನಿರ್ವಹಿಸಿರುವ ರಾಜ್ ಬಿ.ಶೆಟ್ಟಿ  ಒಬ್ಬನನ್ನು ಕೊಂದು  ರೋಮಾಂಚನವಾಗುವಂತೆ ಕುಣಿಯುವ ದೃಶ್ಯ ಅಭಿಮಾನಿಗಳನ್ನು ನಿಬ್ಬೆರಗಾಗಿಸಿತ್ತು. ಆದರೆ ಅದೇ ದೃಶ್ಯ ಇಂದು ವಿವಾದದ ವಸ್ತುವಾಗಿದೆ.

ಈಗ ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕಿಡಿಕಾರಿದ್ದು ಚಿತ್ರದಲ್ಲಿನ ಹಾಡನ್ನು ತೆಗೆದು ಹಾಕುವಂತೆ ಒತ್ತಾಯಿಸಿದ್ದಾರೆ.

ಶತಮಾನದ ಜಾನಪದವನ್ನು , ಸಾಂಸ್ಕೃತಿಕ ಮೌಲ್ಯವನ್ನು ಹಿಂಸೆಯ ಸಂಭ್ರಮಕ್ಕೆ ಬಳಸುವುದು ಸರಿಯೇ? ಸಿನಿಮಾದಲ್ಲಿ ಕೊಲೆಗಾರ ನರ್ತಿಸುತ್ತಿರುವಾಗ ಮಾದಪ್ಪನ ಹಾಡು ಬಳಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಆದ್ದರಿಂದ ಅತ್ಯಂತ ಜನಪ್ರಿಯವಾಗುತ್ತಿರುವ, ಯಶಸ್ಸನ್ನು ಕಂಡ ಈ ಸಿನಿಮಾ ತಂಡ ಈಗ ಈ ಎಲ್ಲ ವಿವಾದಗಳನ್ನು ಎದುರಿಸಬೇಕಾಗಿದೆ.

0 Comments

Post a Comment

Post a Comment (0)

Previous Post Next Post