ಬಂಟ್ವಾಳ: ಚಿರತೆಯೊಂದು ನಾಯಿಯನ್ನು ಬೇಟೆಯಾಡಲು ಬರುತ್ತಿರುವ ದೃಶ್ಯ ವೊಂದು ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನರಿಕೊಂಬು ಗ್ರಾಮದ ನಿರ್ಮಲ್‌ನ ನಿವಾಸಿ ಜಯಂತ್ ಅವರ ಮನೆಯ ಅಂಗಳಕ್ಕೆ ಡಿ.1ರಂದು ರಾತ್ರಿ ವೇಳೆ ಚಿರತೆಯೊಂದು ಮನೆಯ ಆವರಣಕ್ಕೆ ಬಂದು ಹೋಗುವ ದೃಶ್ಯವೊಂದು ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಗ್ರಾಮಸ್ಥರಲ್ಲಿ ಭೀತಿಯನ್ನು ಸೃಷ್ಟಿಸಿದೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಗೆ ವಿಷಯ ತಿಳಿಸಲಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.
Post a Comment