ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿವಶಕ್ತಿ ಪೆರಡಾಲ ಇದರ 29ನೇ ವಾರ್ಷಿಕೋತ್ಸವ, ನೃತ್ಯಾರ್ಪಣಂ, ಗುರುವಂದನೆ

ಶಿವಶಕ್ತಿ ಪೆರಡಾಲ ಇದರ 29ನೇ ವಾರ್ಷಿಕೋತ್ಸವ, ನೃತ್ಯಾರ್ಪಣಂ, ಗುರುವಂದನೆ



ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಧನುಸಂಕ್ರಮಣ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಶಿವಶಕ್ತಿ ಪೆರಡಾಲ ಇದರ 29ನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ರಾತ್ರಿ ಪೆರಡಾಲ ಶ್ರೀ ಉದನೇಶ್ವರ ಸಭಾಭವನದಲ್ಲಿ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ `ನೃತ್ಯಾರ್ಪಣಂ' ಕಾರ್ಯಕ್ರಮ ಜರಗಿತು.


ನಟುವಾಂಗದಲ್ಲಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪುತ್ತೂರು, ಹಾಡುಗಾರಿಕೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ವಿದ್ವಾನ್ ವೆಳ್ಳಿಕೋತ್ ವಿಷ್ಣುಭಟ್, ವಸಂತ ಕುಮಾರ್ ಗೋಸಾಡ, ಮೃದಂಗದಲ್ಲಿ ಗೀತೇಶ್ ಕುಮಾರ್ ನೀಲೇಶ್ವರ, ಕೊಳಲಿನಲ್ಲಿ ರಾಜಗೋಪಾಲ್ ಕಾಞಂಗಾಡು ಸಹಕರಿಸಿದರು. ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2020ರಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳಿಂದ ಗುರುವಂದನೆ ಜರಗಿತು. ವಿದ್ಯಾರ್ಥಿಗಳಾದ ಶಮಾ ವಳಕ್ಕುಂಜ, ಧೃತಿ ಕೊರೆಕ್ಕಾನ, ಸುಮೇಧಾ ಕಲ್ಲಕಟ್ಟ, ಸಮನ್ವಿತಾ ವಳಕ್ಕುಂಜ, ದೀಕ್ಷಾ ಬದಿಯಡ್ಕ, ಅವ್ಯಯ ಸುಧಾ ಚೂರಿಕ್ಕೋಡು, ಸ್ವಾತಿ ಕಾರ್ಯಾಡು, ವೈಶಾಲಿ ಮಿಂಚಿನಡ್ಕ, ಶರಣ್ಯ ಬದಿಯಡ್ಕ ಫಲಕಾಣಿಕೆಗಳನ್ನಿತ್ತು ಗೌರವಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم