ರೈತ ಹೊಟ್ಟೆತುಂಬ ಅನ್ನ ನೀಡಿದರೆ, ಹಿಡಿ ರಾತ್ರಿ ಕಣ್ಣ ತುಂಬಾ ನೆಮ್ಮದಿಯಿಂದ ನಿದ್ರೆ ಮಾಡಲು ತಮ್ಮ ಉಸಿರನ್ನೇ ಪಣವಾಗಿ ಇಟ್ಟಿರುತ್ತಾರೆ, ಈ ವೀರಯೋಧರು. ಇವರು ಕೇವಲ ಗಡಿಯನ್ನು ಕಾಯುವರಲ್ಲ, ಬದಲಾಗಿ ನಮ್ಮೆಲ್ಲರ ಉಸಿರನ್ನು ಕಾಯುವರು. ದೇಶಕ್ಕೆ ಇಟ್ಟ ಅವರ ಹೆಜ್ಜೆ ನಮ್ಮ ಈ ಪುಣ್ಯ ಭೂಮಿಯನ್ನು ಪಾವನಗೊಳಿಸಿದೆ, ನಾವು ಆರಿಸುವ ತ್ರಿವರ್ಣಧ್ವಜ ಇವರ ಉಸಿರಿನಲ್ಲಿ ಹಾರಡುತ್ತದೆ. ತನ್ನ ಪರಿವಾರ ನೆಲಬಿಟ್ಟು ನಮ್ಮ ದೇಶದ ರಕ್ಷಣೆಯನ್ನು ಮಾಡುತ್ತಾರೆ. ಅವರವರ ಕರ್ತವ್ಯವನ್ನು ನಿಷ್ಠೆಯಿಂದ, ಗೌರವತನದಿಂದ, ಪ್ರೀತಿಯಿಂದ ನೆರವೇರಿಸುತ್ತಾರೆ. ನಾನು ಇವತ್ತು ಇರುತ್ತೇನೋ, ನಾಳೆ ಇರುತ್ತೇನೊ, ಎನ್ನುವಂತಹ ಆಲೋಚನೆ ಕೂಡ ಇವರ ಮನಸ್ಸಿನಲ್ಲಿ ಬರುವುದಿಲ್ಲ. ಕಷ್ಟಗಳನ್ನೆಲ್ಲ ಉಗ್ರರೊಂದಿಗೆ ಹೋರಾಡುತ್ತಾರೆ. ಕಡುಬಡವರ ಮಕ್ಕಳು ಹೆಚ್ಚಿನದಾಗಿ ಸೈನಿಕರ ಪಡೆಗೆ ಸೇರಿರುತ್ತಾರೆ, ದೇವರಿಗೂ ಇವರಿಗೂ ಇರುವ ಅಜಗಜಾಂತರ ವ್ಯತ್ಯಾಸವೇನೆಂದರೆ, "ದೇವರು ಕಣ್ಣಿಗೆ ಕಾಣುವುದಿಲ್ಲ ಬದಲಾಗಿ ಇವರು ದೇವರ ಪ್ರತಿರೂಪವಾಗಿ ಯೋಧರು ಕಾಣಿಸುತ್ತಾರೆ. ಇವರು ಮಾಡುವ ತ್ಯಾಗದ ಪ್ರತಿಫಲದಿಂದ ನಾವು ಸುಖವಾಗಿದ್ದೇವೆ. ಹಿಮಚ್ಛಾದಿತ ಕಠೋರ ಪ್ರದೇಶಗಳಲ್ಲಿ 0.2ಸೆಲ್ಸಿಯಸ್ ನ ಹಿಮದಲ್ಲಿ ಅವರು ಇರುತ್ತಾರೆ. ಅಪಾಯಕಾರಿ ಯುದ್ಧಗಳು ವಿಪರೀತವಾದ ಚಳಿ, ಬಿಸಿಲು, ಮಳೆ, ಗಾಳಿ ಎಲ್ಲಿಯೂ ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸುತ್ತಾರೆ. ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಕೊಂಡು ದೇಶಕ್ಕೆ ನೆರವಾಗುತ್ತಾರೆ. ನಾವು ಮನೆಗಳಲ್ಲಿ ಇಷ್ಟು ಸುರಕ್ಷಿತವಾಗಿದ್ದೇವೆ ಎಂದರೆ, ನಮ್ಮ ದೇಶದ ಸೈನಿಕರೇ ಕಾರಣಕರ್ತರು.
ಇವರು ದೇಶದ ಮೇಲಿಟ್ಟಿರುವ ಅಪಾರ ಪ್ರೀತಿ, ಪ್ರೇಮದಿಂದ ತಮ್ಮ ತಾಯ್ನಾಡಿಗೆ ತಮ್ಮಜೀವವನ್ನು ತಾಯಿ ಭಾರತಾಂಬೆಯ, ಮಡಿಲಲ್ಲಿ ಬಿಡುತ್ತಾರೆ. ಪ್ರತಿವರ್ಷವೂ ಜನವರಿ 15 ಯೋಧರ ದಿನವನ್ನಾಗಿ ಆಚರಿಸುತ್ತೇವೆ. ಸೈನಿಕರು ಮಾಡಿದ ಅದೆಷ್ಟೋ ಸಾಹಸ, ಶೌರ್ಯವನ್ನು ಆ ದಿನ ಮೆಲುಕು ಹಾಕುತ್ತೇವೆ. ಇತ್ತೀಚೆಗೆ ನಡೆದ ಪುಲ್ವಾಮ ದಾಳಿ ಇದು ನಮ್ಮ ದೇಶದಲಿ ಕಗ್ಗತ್ತಲು ಆವರಿಸಿದ ದಿನ ಎನ್ನಬಹುದು, 2019 ಫೆಬ್ರವರಿ 14ರಂದು ಅದೆಷ್ಟೋ ಯೋಧರು ಘನಘೋರ ಘಟನೆಯಿಂದ ಮರಣ ಹೊಂದಿದರು. ಜಮ್ಮು-ಕಾಶ್ಮೀರದಿಂದ ಶ್ರೀನಗರಕ್ಕೆ ತೆರಳುತ್ತಿದ್ದ, 2,500 ಯೋಧರು, 78 ಬಸ್ಸುಗಳಲ್ಲಿ ಸಂಚರಿಸುವಾಗ ಎದುರಿನಿಂದ ಬರುತ್ತಿದ್ದ, 350 ಕೆ.ಜಿ ಬಾಂಬ್ ಹೊಂದಿದ ವಾಹನ ಮೂರು ಬಸ್ಸಿಗೆ ತಗಲಿ 40 ಮಂದಿ ಯೋಧರು ಸಾವನ್ನಪ್ಪಿದರು. ಅದೆಷ್ಟೋ ಹೆಣ್ಣುಮಕ್ಕಳಿಗೆ ಅಣ್ಣಂದಿರನ್ನು ಕಳೆದುಕೊಂಡ ಹಾಗೆ, ತಂದೆ-ತಾಯಿಯರಿಗೆ ತಮ್ಮ ಮಕ್ಕಳನ್ನು ಕಳೆದುಕೊಂಡ ಹಾಗೆ ಎಲ್ಲರ ಮನಸ್ಥಿತಿಯೂ ಆಗಿತ್ತು. ಈ ದಿನವನ್ನು ಇಡೀ ದೇಶವೇ "ಬ್ಲಾಕ್ ಡೇ"ಎಂಬುದಾಗಿ ನೆನೆಯುತ್ತೇವೆ.
ಎರಡು ವರ್ಷದ ಹಿಂದೆ ನಡೆದ ಪುಲ್ವಾಮ ಘಟನೆಯನ್ನು ಆರಗಿಸಿಕೊಳ್ಳುತ್ತಿದ್ದೇವೆ ಎನ್ನುವುದರೊಳಗೆ ಮತ್ತೊಂದು ಸುದ್ದಿ ಕೇಳಿಬಂತು. ಅದು ಜನರಲ್ ಬಿಪಿನ್ ರಾವತ್ ಅವರ ದುರಂತದ ಸುದ್ದಿ. ಶ್ರೇಷ್ಠ ಸೇನಾ ಮುಖ್ಯಸ್ಥರಾಗಿದ್ದವರು, 8/12/2021 ರಂದು ಹೆಲಿಕ್ಯಾಪ್ಟರ್ ನಲ್ಲಿ ಬರುವಾಗ ತಮಿಳುನಾಡಿನ ಕೂನೂರಿನಲ್ಲಿ, ಅಪಘಾತ ಸಂಭವಿಸಿತ್ತು. ಪತ್ನಿ ಮಧುಲಿಕಾ ರಾವತ್, ಹಾಗೆ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಗುರು ಸೇವಕ್ ಸಿಂಗ್, ಜಿತೇಂದ್ರ ಕುಮಾರ್, ಇವರೆಲ್ಲಾ 'mi-17vs' ಹೆಲಿಕ್ಯಾಪ್ಟರ್ ನಲ್ಲಿ ದುರಂತ ಸಾವಿಗೀಡಾದರು. 'ಬಿಪಿನ್ ರಾವತ್ ರವರ ದುರ್ಮರಣ ನಮ್ಮ ದೇಶಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಹೆಮ್ಮೆಯ ವೀರಪುತ್ರ ಬಿಪಿನ್ ರಾವತ್ ನಿಮ್ಮ ಸೇವೆಯನ್ನು ದೇಶ ಸದಾ ಸ್ಮರಿಸುತ್ತದೆ.
"ಸೈನಿಕ ಎಂದು ಉಚ್ಚರಿಸುವಾಗಲೇ ಮನಸ್ಸಿನಲ್ಲಿ ಏನೋ ಒಂದು ಆಸಕ್ತಿ ಉತ್ಸಾಹ ಗೌರವ ಯಾಕೆಂದರೆ ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಪಣತೊಟ್ಟು ನಿಲ್ಲುತ್ತಾನೆಂದರೆ ಅದು ಸೈನಿಕ"
-ದೀಕ್ಷಿತ ಗಿರೀಶ್
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment