ವಿಟ್ಲ: ನಿವೃತ್ತ ಶಿಕ್ಷಕ ಮುಂಡಮೂಲೆ ನಿವಾಸಿ ಗೋಪಾಲಕೃಷ್ಣ ಭಟ್ (63) ಅವರು ಡಿ. 26ರಂದು ಹೃದಯಾಘಾತದಿಂದ ನಿಧನ ಹೊಂದಿದರು.
ಮೊದಲಿಗೆ ಮಾದಕಟ್ಟೆಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ಬಳಿಕ ಅಳಿಕೆಯ ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸುದೀರ್ಘ 40 ವರ್ಷಗಳ ಕಾಲ ಶಿಕ್ಷಕರಾಗಿದ್ದ ಅವರು ಯಕ್ಷಗಾನ ಮತ್ತು ಕಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಅವರು ಪತ್ನಿ ಕೇಪು ಶಾಲೆಯ ಮುಖ್ಯ ಶಿಕ್ಷಿಕಿಯಾಗಿರುವ ಭಾಗೀರಥಿ, ಪುತ್ರಿಯರಾದ ಪ್ರಭಾ, ಪ್ರಿಯಾ ಮತ್ತು ಪುತ್ರ ಪ್ರಸನ್ನ ಅವರನ್ನು ಅಗಲಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق