ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರಿನ ಕೆಎಂಸಿಯ ನಿವೃತ್ತ ವೈದ್ಯ, ಖ್ಯಾತ ಸರ್ಜನ್‌ ಡಾ. ಎಂ. ಶ್ರೀನಿವಾಸನ್ ನಿಧನ

ಮಂಗಳೂರಿನ ಕೆಎಂಸಿಯ ನಿವೃತ್ತ ವೈದ್ಯ, ಖ್ಯಾತ ಸರ್ಜನ್‌ ಡಾ. ಎಂ. ಶ್ರೀನಿವಾಸನ್ ನಿಧನ


ಮಂಗಳೂರು: ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಸರ್ಜರಿ ವಿಭಾಗದ ಮುಖ್ಯಸ್ಥರಾಗಿದ್ದ ಪ್ರಸಿದ್ಧ ಸರ್ಜನ್‌ ಡಾ. ಎಂ. ಶ್ರೀನಿವಾಸನ್ (92) ಚೆನ್ನೈನ ತಮ್ಮ ನಿವಾಸದಲ್ಲಿ ಸೋಮವಾರ (ಡಿ.20) ನಿಧರರಾದರು.


ಆಗಿನ ಮದ್ರಾಸ್‌ ಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಇಂಗ್ಲೆಂಡಿನಲ್ಲಿ F.R.C.S ಪದವಿ ಪಡೆದಿದ್ದರು. ಆ ಬಳಿಕ ಮಂಗಳೂರಿನಲ್ಲಿ ವೃತ್ತಿ ಜೀವನ ಆರಂಭಿಸಿದ ಡಾ. ಶ್ರೀನಿವಾಸನ್ ಅವರು, ಕೆಲವು ದಶಕಗಳ ಕಾಲ ಸರ್ಜನ್‌ ಆಗಿ ಸೇವೆ ಸಲ್ಲಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉತ್ತಮ ವಾಗ್ಮಿಯೂ ಆಗಿದ್ದ ಅವರು, ಮಂಗಳೂರು ರೋಟರಿ ಕ್ಲಬ್ ಸದಸ್ಯರಾಗಿದ್ದರು. ನಿವೃತ್ತಿಯ ಬಳಿಕ ಹುಟ್ಟೂರು ಚೆನ್ನೈಗೆ ಹಿಂತಿರುಗಿ ಅಲ್ಲೇ ನೆಲಸಿದ್ದರು.


ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.  ಅವರ ಒಬ್ಬ ಪುತ್ರ ಇಂಗ್ಲೆಂಡಿನಲ್ಲಿ ನೇತ್ರ ತಜ್ಞರಾಗಿದ್ದರೆ, ಇನ್ನೊಬ್ಬ ಪುತ್ರ ಡಾ. ಮಹದೇವನ್  ಅಮೆರಿಕದಲ್ಲಿ ಮನೋರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಾ. ಮಹದೇವನ್‌ ತಮ್ಮ ಅಸಾಧಾರಣ ಸ್ಮರಣ ಶಕ್ತಿಗಾಗಿ ಅವರು ಗಿನ್ನೆಸ್‌ ದಾಖಲೆಯಲ್ಲಿ ಸೇರ್ಪಡೆಯಾಗಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post