ಬೆಂಗಳೂರು: ಲವ್ಲಿ ಸ್ಟಾರ್ ಪ್ರೇಮ್ ನಟನೆಯ " ಪ್ರೇಮಂ ಪೂಜ್ಯಂ" ಚಿತ್ರ ಬಿಡುಗಡೆಯಾಗಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಇದೀಗ ಪ್ರೇಮಂ ಪೂಜ್ಯಂ 2 ಕೂಡ ತೆರೆಕಾಣಲಿದೆ ಎಂಬ ಮಾಹಿತಿ ಬಂದಿದೆ.
ಪ್ರೇಮಂ ಪೂಜ್ಯಂ ಚಿತ್ರ ಈಗಾಗಲೇ ರಿಲೀಸ್ ಆಗಿದ್ದು 50 ನೇ ದಿನದತ್ತ ಸಾಗಿದೆ. ಇದೇ ಚಿತ್ರತಂಡ ಹೊಸ ಸುದ್ದಿ ನೀಡಿದ್ದು ' ಪ್ರೇಮಂ ಪೂಜ್ಯಂ 2 ಕೂಡ ಬರಲಿದೆಯಂತೆ. ಪ್ರೇಮಿಗಳ ದಿನದಂದು (ಫೆ. 14) ಎರಡನೇ ಭಾಗಕ್ಕೆ ಚಾಲನೆ ನೀಡಲು ತಂಡ ಸಿದ್ಧವಾಗಿದೆ.
ಈಗಾಗಲೇ ನಿರ್ದೇಶಕ ಡಾ. ಬಿ.ಎಸ್ ರಾಘವೇಂದ್ರ ಚಿತ್ರಕಥೆ ಸಹ ರೆಡಿ ಮಾಡಿದ್ದಾರೆ. ಮುಂದಿನ ಭಾಗದಲ್ಲಿ ಒಂದಷ್ಟು ಕುತೂಹಲಕರ ಕಥೆಯನ್ನು ಬಿಚ್ಚಿಡಲು ನಿರ್ದೇಶಕರು ಪ್ಲಾನ್ ಮಾಡಿದ್ದಾರೆ. ಆದ್ದರಿಂದ ಸದ್ಯದಲ್ಲೇ ಈ ಚಿತ್ರದ ಕಾರ್ಯ ಕೂಡ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
Post a Comment