ಇತ್ತೀಚೆಗಷ್ಟೇ ಕನ್ನಡ ಚಿತ್ರತಂಡ ಒಬ್ಬ ಅದ್ಭುತ ನಾಯಕನ ಸಾವಿನಿಂದ ಅಪಾರ ನೋವನ್ನುಂಡಿತ್ತು. ಹೌದು ಕೇವಲ ಚಿತ್ರತಂಡ ಅಷ್ಟೇ ಅಲ್ಲದೆ ಇಡೀ ದೇಶದ ಜನತೆ ನಟ ಪುನೀತ್ ರಾಜ್‍ಕುಮಾರ್ ಸಾವಿಗೆ ಶೋಕವನ್ನು ವ್ಯಕ್ತಪಡಿಸಿತ್ತು. ಅವರು ಮರಣ ಹೊಂದಿ ಒಂದು ತಿಂಗಳಾದರೂ ಇಂದಿಗೂ ಅವರ ಸಾವಿನ ನೋವು ಮರೆಯಲು ಅಸಾಧ್ಯ. ಅದೆಷ್ಟೋ ವರ್ಷದ ನಂತರ ಕರ್ನಾಟಕದಲ್ಲಿ ಬಹುಶಃ ಇಂಥ ಸಾವನ್ನು ನಾವು ನೋಡಿರುವುದು. ಆದರೆ ಇಂದು ಮತ್ತೊಂದು ದುಃಖದ ಸಂಗತಿಯೆಂದರೆ ಇಂದಿಗೆ ಪುನೀತ್ ರಾಜ್‍ಕುಮಾರ್ ಹಾಗೂ ಅವರ ಪತ್ನಿ ವಿವಾಹವಾಗಿ 22 ವರ್ಷ. ವಿವಾಹ ವಾರ್ಷಿಕೋತ್ಸವದ ಈ ಸುದಿನ ಆಚರಿಸಿಕೊಳ್ಳಲು ಗಂಡನೇ ಇಲ್ಲದ ವಿಷಾದ ಅನುಭವ ಯಾವ ಹೆಂಡತಿಗೂ ಬೇಡ. ಈ ನೋವು ಅವರ ಪತ್ನಿಯನ್ನು ಮಾತ್ರವಲ್ಲ, ಕೋಟ್ಯಾಂತರ ಅಭಿಮಾನಿಗಳನ್ನು ಕಾಡುತ್ತಿದೆ.
Post a Comment