ಮಂಗಳೂರು: 'ಕವಿಗಳ ಭಾವನೆಗಳನ್ನು ಅರಿತುಕೊಳ್ಳುವ ಸಂಘಟಕರು ವಿರಳ.ಗೋಷ್ಠಿಯಲ್ಲಿ ಕವಿಗಳಿಗೆ ಚುಟುಕು ಸಾಹಿತ್ಯ ಪರಿಷತ್ತು ನೀಡಿದ ಗೌರವ ಆದರಾತಿಥ್ಯಗಳು ಸಂತೋಷದಾಯಕವಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಪರಿಷತ್ತು ಮಾಡುತ್ತಿರುವ ನಿರಂತರ ಸೇವೆ ಅಮೋಘ ಮತ್ತು ಅಭಿನಂದನೀಯ. ಗೋಷ್ಠಿಯಲ್ಲಿ ಭಾಗವಹಿಸಿದ ಕವಿ ಕವಯತ್ರಿಯರು ಪ್ರಸ್ತುತ ಪಡಿಸಿದ ಬಹುಪ್ರಕಾರ ಮತ್ತು ಬಹು ವಿಷಯಗಳ ಕವಿತೆಗಳು ಮನೋಜ್ಞವಾಗಿದ್ದವು' ಎಂದು ಕವಿ ಅಶೋಕ ಎನ್ ಕಡೇ ಶಿವಾಲಯ ಅವರು ಹೇಳಿದರು.
ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು,ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಜಂಟಿಯಾಗಿ ಡಿಸೆಂಬರ್ 25ರಂದು ಆಯೋಜಿಸಿದ್ದ 'ಕಾವ್ಯಕಸ್ತೂರಿ' ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಉದಯೋನ್ಮುಖ ಕವಿ ಲತೀಶ್ ಎಂ ಸಂಕೊಳಿಗೆ ಗೋಷ್ಠಿಯನ್ನು ತಮ್ಮ ಕವಿತೆಯನ್ನು ವಾಚಿಸುವ ಮೂಲಕ ಉದ್ಘಾಟಿಸಿದರು.
ಗೋಷ್ಠಿಯಲ್ಲಿ ರೇಮಂಡ್ ಡಿಕುನಾ ತಾಕೊಡೆ, ಅರ್ಚನಾ ಎಂ.ಬಂಗೇರಾ ಕುಂಪಲ, ಸೌಮ್ಯ ಆರ್ ಶೆಟ್ಟಿ, ಗುಣಾಜೆ ರಾಮಚಂದ್ರ ಭಟ್, ಚಂದ್ರ ಪ್ರಭಾವತಿ, ಗೋಪಾಲಕೃಷ್ಣ ಶಾಸ್ತ್ರಿ, ಜೀವಪರಿ, ಡಾ.ಸುರೇಶ್ ನೆಗಳಗುಳಿ, ವಾಣಿ ಲೋಕಯ್ಯ, ಬಾಲಕೃಷ್ಣ ಕೇಪುಳು, ರಶ್ಮಿ ಸನಿಲ್, ಬದ್ರುದ್ದೀನ್ ಕೂಳೂರು, ಮಂಜುಶ್ರೀ ಎನ್ ನಲ್ಕ,ಹಿತೇಶ್ ಕುಮಾರ್ ಎ., ಡಾ.ವಾಣಿಶ್ರೀ, ವೆಂಕಟೇಶ್ ಗಟ್ಟಿ, ಆಕೃತಿ ಐ ಎಸ್ ಭಟ್,ಎಂ ಪಿ ಬಶೀರ್ ಅಹ್ಮದ್, ನಳಿನಾಕ್ಷಿ ಉದಯರಾಜ್, ಅರುಣಾ ನಾಗರಾಜ್, ರೇಖಾ ಸುದೇಶ್ ರಾವ್, ರೇಖಾ ನಾರಾಯಣ್, ಸೌಮ್ಯ ಗೋಪಾಲ್, ಗುರುರಾಜ್ ಎಂ.ಆರ್, ಉಮೇಶ್ ಶಿರಿಯಾ ಹಾಗೂ ವಿದ್ಯಾಶ್ರೀ ಅಡೂರು ಕವಿಗಳಾಗಿ ಭಾಗವಹಿಸಿ ಸ್ವರಚಿತ ಕವನ ಮತ್ತು ಚುಟುಕುಗಳನ್ನು ವಾಚಿಸಿದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, ದಕ್ಷಿಣ ಕನ್ನಡ ಜಿಲ್ಲಾ ಚುಸಾಪ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಮಂಗಳೂರು ಚುಸಾಪ ಜತೆಕಾರ್ಯದರ್ಶಿ ವೆಂಕಟೇಶ್ ಗಟ್ಟಿ ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಣೆ ಮಾಡಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق