ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಘು ಇಡ್ಕಿದು ಅವರಿಗೆ 'ಹಂಸಕಾವ್ಯ ಪುರಸ್ಕಾರ'

ರಘು ಇಡ್ಕಿದು ಅವರಿಗೆ 'ಹಂಸಕಾವ್ಯ ಪುರಸ್ಕಾರ'


ಮಂಗಳೂರು: ಮಂಗಳೂರಿನ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಅತ್ಯುತ್ತಮ ಪ್ರಕಟಿತ ಕವನಸಂಕಲನಕ್ಕೆ ರಾಜ್ಯಮಟ್ಟದಲ್ಲಿ ನೀಡುವ 2021ನೇ ಸಾಲಿನ ಹಂಸಕಾವ್ಯ ಪುರಸ್ಕಾರಕ್ಕೆ ಕವಿ ರಘು ಇಡ್ಕಿದು ಅವರ 'ನೆತ್ತರು ಮತ್ತು ಮೌನದೊಳಗೊಂದು ಚಿತ್ರ' ಕವನ ಸಂಕಲನ ಆಯ್ಕೆಗೊಂಡಿದೆ. ಪುರಸ್ಕಾರವು 10 ಸಾವಿರ ರೂಪಾಯಿ ನಗದು, ಚಿನ್ನದ ಪದಕ, ಪ್ರಶಸ್ತಿ ಫಲಕ ಹಾಗೂ ಗೌರವ ಸನ್ಮಾನವನ್ನು ಒಳಗೊಂಡಿದೆ.


ಪ್ರಶಸ್ತಿ ಪ್ರದಾನ ಸಮಾರಂಭವು ಫೆ.15, 2022ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم