ಮೇಕೇರಿ: ಸ್ವಾಗತ ಯುವಕ ಸಂಘ (ರಿ) ಮೇಕೇರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮೇಕೇರಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 10 ನೇ ವರ್ಷದ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷೆ ಹಾಗೂ ಮಡಿಕೇರಿ ನಗರ ಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತಾ ಪೂವಯ್ಯ ನೆರವೇರಿಸಿದರು. ರಕ್ತದಾನದ ಮಹತ್ವದ ಬಗ್ಗೆ ರಕ್ತನಿಧಿ ಕೇಂದ್ರದ ವೈದ್ಯರಾದ ಡಾ||ಕರುಂಬಯ್ಯ ಮಾಹಿತಿ ನೀಡಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾ.ಜ.ಪಾ. ತಾಲ್ಲೂಕು ಅಧ್ಯಕ್ಷರಾದ ಕಾಂಗೀರ ಸತೀಶ್ ಮಾತನಾಡಿ, ಈ ದೇಶ ಕಂಡ ಅಪ್ರತಿಮ ದೇಶಭಕ್ತ ಅಜಾತಶತ್ರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶಗಳನ್ನೇ ಪ್ರೇರಣೆಯಾಗಿಯಾಗಿಸಿ ಸ್ಥಳೀಯ ಸ್ವಾಗತ ಯುವಕ ಸಂಘದ ಮೂಲಕ ನಡೆಸುತ್ತಿರುವ ರಕ್ತದಾನ ಶಿಬಿರ ಎಲ್ಲರಿಗೂ ಮಾದರಿಯಾಗಿದೆಯೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಯುವಕ ಒಕ್ಕೂಟದ ಅಧ್ಯಕ್ಷರಾದ ಪಿ.ಪಿ. ಸುಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ, ಶ್ರಿ ಗೌರಿಶಂಕರ ದೇವಾಲಯದ ಟ್ರಸ್ಟಿ ಪಿ.ಯಂ.ದಾಮೋದರ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಫೀಕ್, ಮುಖ್ಯೋಪಾಧ್ಯಾಯರಾದ ಸಬೀತಾ, ಗ್ರಾ.ಪಂ. ಸದಸ್ಯರಾದ ಸುಶೀಲಾ ಮಧು, ಕಾಂಗೀರ ಕೀರ್ತನ್, ಹನೀಫ್, ಶುಭಾ ಭರತ್, ಉಪಸ್ಥಿತರಿದ್ದರು. ಸ್ವಾಗತ ಯುವಕ ಸಂಘದ ಅಧ್ಯಕ್ಷ ಜೆ. ಹರೀಶ್ ಸರ್ವರನ್ನು ಸ್ವಾಗತಿಸಿ ಸದಸ್ಯರಾದ ಟಿ.ವಿˌಲೋಕೇಶ್ ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق