ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಜ್ಯಸಭಾ ಸದಸ್ಯರಾಗಿದ್ದ ಮಹೇಂದ್ರ ಪ್ರಸಾದ್ ಇನ್ನಿಲ್ಲ

ರಾಜ್ಯಸಭಾ ಸದಸ್ಯರಾಗಿದ್ದ ಮಹೇಂದ್ರ ಪ್ರಸಾದ್ ಇನ್ನಿಲ್ಲ

ನವದೆಹಲಿ: ಜನತಾದಳದ ರಾಜ್ಯ ಸಭಾ ಸಂಸದ ಹಾಗೂ ಕೈಗಾರಿಕೋದ್ಯಮಿ ಮಹೇಂದ್ರ ಪ್ರಸಾದ್ ಅವರು ಇಂದು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಪಕ್ಷದ ಮೂಲಗಳು ತಿಳಿಸಿವೆ‌. 

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 81 ವರ್ಷದ ಮಹೇಂದ್ರ ಪ್ರಸಾದ್ ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಇವರು ಬಿಹಾರದಿಂದ ಏಳು ಬಾರಿ ರಾಜ್ಯಸಭೆಗೆ ಮತ್ತು ಲೋಕಸಭೆಗೆ ಆಯ್ಕೆಯಾಗಿದ್ದರು. 

ಅರಿಸ್ಟೋ ಫಾರ್ಮಾಸ್ಯುಟಿಕಲ್ಸ್ ನ ಸಂಸ್ಥಾಪಕರೂ ಆಗಿರುವ ಮಹೇಂದ್ರ ಪ್ರಸಾದ್ ಅವರ ನಿಧನಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಮಹೇಂದ್ರ ಪ್ರಸಾದ್ ಅವರ ನಿಧನವು ಉದ್ಯಮದ ಜೊತೆಗೆ ಸಮಾಜ ಮತ್ತು ರಾಜಕೀಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ.

0 تعليقات

إرسال تعليق

Post a Comment (0)

أحدث أقدم