ಮಂಗಳೂರು: ವಿಧಾನಪರಿಷತ್ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಚುನಾವಣಾ ಕ್ಷೇತ್ರಕ್ಕೆ ಡಿಸೆಬರ್ 10 ರಂದು ನಡೆದಿರುವ ಚುನಾವಣಾ ಮತ ಎಣಿಕೆ ಇಂದು ನಡೆಯಲಿದೆ.
ಮಂಗಳೂರಿನ ಪಾಂಡೇಶ್ವರದಲ್ಲಿರುವ ರೊಸಾರಿಯೋ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭಗೊಳ್ಳಲಿದೆ. ಇದಕ್ಕೆ ಅನುಕೂಲವಾಗಿ ಎರಡು ಹಾಲ್ ಗಳಲ್ಲಿ ಒಟ್ಟು 14 ಟೇಬಲ್ ಗಳನ್ನು ಸಿದ್ಧಗೊಳಿಸಲಾಗಿದೆ. ಒಟ್ಟು 389 ಮತಗಟ್ಟೆಗಳ 6,013 ಮತಗಳು ಎಣಿಕೆಯಾಗಲಿದೆ.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುನಾಥ ಭಂಡಾರಿ ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಶಾಫಿ ಕೆ . ಚುನಾವಣಾ ಕಣದಲ್ಲಿದ್ದಾರೆ.
إرسال تعليق