ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲಾರಿ ಮತ್ತು ಸ್ಕೂಟರ್ ಅಪಘಾತ; ಅವಳಿ ಮಕ್ಕಳಿಬ್ಬರು ಬಲಿ, ತಂದೆ ತಾಯಿ ಸ್ಥಿತಿ ಗಂಭೀರ

ಲಾರಿ ಮತ್ತು ಸ್ಕೂಟರ್ ಅಪಘಾತ; ಅವಳಿ ಮಕ್ಕಳಿಬ್ಬರು ಬಲಿ, ತಂದೆ ತಾಯಿ ಸ್ಥಿತಿ ಗಂಭೀರ

 


ಹಾಸನ; ಚಲಿಸುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಅವಳಿ ಮಕ್ಕಳಿಬ್ಬರು ಸ್ಥಳದಲ್ಲೇ ಮೃತಪಟ್ಟು, ತಂದೆ ತಾಯಿ ಗಂಭೀರ ಗಾಯಗೊಂಡ ಘಟನೆಯೊಂದು ಇಲ್ಲಿನ ಹೊರವಲಯದ ರಾ.ಹೆ ಭೂವನಹಳ್ಳಿ ಸಮೀಪ ನಡೆದಿದೆ.

ಮೃತಪಟ್ಟ ಅವಳಿ ಮಕ್ಕಳಾದ ಪ್ರಣತಿ ಹಾಗೂ ಪ್ರಣವ್ ಎಂದು ಗುರುತಿಸಲಾಗಿದೆ.   ಗಂಭೀರ ಗಾಯಗೊಂಡ ಶಿವಾನಂದ್ ಹಾಗೂ ಜ್ಯೋತಿ ದಂಪತಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಚಲಾಯಿಸುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಲಾರಿ ಚಾಲಕ ಮದ್ಯ ಸೇವಿಸಿರುವುದೇ ಈ ಘಟನೆಗೆ ಕಾರಣವೆನ್ನಲಾಗಿದೆ. ಈ ಬಗ್ಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم