ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುಂಬ್ರ; ಎರಡು ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ; ಓರ್ವ ಸಾವು

ಕುಂಬ್ರ; ಎರಡು ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ; ಓರ್ವ ಸಾವು

 




ಪುತ್ತೂರು : ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸಾವನಪ್ಪಿದ ಘಟನೆಯೊಂದು ಕುಂಬ್ರ ಸಮೀಪದ ಕೊಲ್ಲಾಜೆ ಎಂಬಲ್ಲಿ ನಡೆದಿದೆ.


ಕೊಲ್ಲಾಜೆ ಒಳರಸ್ತೆಯಿಂದ ಟಿವಿಎಸ್ ಜುಪಿಟರ್ ಹಾಗೂ ಕೆಯ್ಯೂರು ಕಡೆಯಿಂದ ಕುಂಬ್ರ ಕಡೆಗೆ ಹೋಗುತ್ತಿದ್ದ ಕೆ.ಟಿ.ಎಂ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಎರಡೂ ದ್ವಿಚಕ್ರ ಸವಾರರು ರಸ್ತೆಗೆಸೆಯಲ್ಪಟ್ಟಿದ್ದು ಬೈಕ್ ಸಮೀಪದ ಚರಂಡಿಗೆ ಉರುಳಿ ಬಿದ್ದಿದೆ.


ಜುಪಿಟರ್ ಸವಾರ ರಬ್ಬರ್ ಟ್ಯಾಪಿಂಗ್ ಮಾಡುವ ಕಾರ್ಮಿಕನಾಗಿದ್ದು ಗಂಭೀರವಾಗಿ ಗಾಯಗಳಾಗಿದ್ದು, ಕೆಟಿಎಂ ಸವಾರ ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಗೂಡ್ಸ್ ಆಟೋದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಮಾಹಿತಿ ಪ್ರಕಾರ ಸ್ಕೂಟರ್ ಸವಾರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم