ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೂಳೂರು: ಕೋಟ್ಯಾನ್ ಕುಟುಂಬಸ್ಥರ ಮೂಲಸ್ಥಾನದಲ್ಲಿ ನಾಗನಕಲ್ಲುಗಳ ಪುನರ್ ಪ್ರತಿಷ್ಠಾಪನೆ

ಕೂಳೂರು: ಕೋಟ್ಯಾನ್ ಕುಟುಂಬಸ್ಥರ ಮೂಲಸ್ಥಾನದಲ್ಲಿ ನಾಗನಕಲ್ಲುಗಳ ಪುನರ್ ಪ್ರತಿಷ್ಠಾಪನೆ



ಮಂಗಳೂರು: ಇತ್ತೀಚಿಗೆ ಕೂಳೂರುವಿನಲ್ಲಿ ಕೋಟ್ಯಾನ್ ಕುಟುಂಬಸ್ಥರ ಮೂಲಸ್ಥಾನದಲ್ಲಿ ನಾಗನಕಲ್ಲುಗಳಿಗೆ ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ ನಡೆದಿತ್ತು. ಇದರ ವಿರುದ್ಧ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಕೂಡ ನಡೆದಿತ್ತು.


ಭಾನುವಾರ ಅದೇ ಸ್ಥಳದಲ್ಲಿ ನಾಗನ ಕಲ್ಲಿನ ಪುನರ್ ಪ್ರತಿಷ್ಠಾಪನೆ, ಆಶ್ಲೇಷ ಬಲಿ, ವಟು ಆರಾಧನೆ, ನವಕ ಪ್ರಧಾನ ಹೋಮ ಮತ್ತು ತಂಬಿಲ ಸೇವೆಯ ಕಾರ್ಯಕ್ರಮಗಳು ವೈದಿಕ ಮುಖೇನ ಧಾರ್ಮಿಕ ವಿಧಿವಿಧಾನಗಳ ಮೂಲಕ ನಡೆಯಿತು.


ಈ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ವೈ.ಭರತ್ ಶೆಟ್ಟಿಯವರು ಆಗಮಿಸಿ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم