ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕ್ರಿಸ್ಮಸ್ ಬಹುಭಾಷಾ ಕವಿಗೋಷ್ಠಿ

ಕ್ರಿಸ್ಮಸ್ ಬಹುಭಾಷಾ ಕವಿಗೋಷ್ಠಿ



ಮಂಗಳೂರು: ಮಂಗಳೂರಿನ‌ ಡಾನ್ ಬಾಸ್ಕೋ ಹಾಲ್‌ನಲ್ಲಿ ಡಿಸೆಂಬರ್‌ 26ರ ಇಳಿಹಗಲು ಕ್ರಿಸ್ಮಸ್ ಬಹುಭಾಷಾ ಕವಿಗೋಷ್ಠಿಯು ವಿಜೃಂಭಣೆಯಿಂದ ನಡೆಯಿತು.


ಶ್ರೀಮತಿ ಲಕ್ಷ್ಮಿ ಹಿಪ್ಪರಗಿಯವರ ಗಾಯನದಿಂದ ಮೊದಲ್ಗೊಂಡ ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಕೇಕನ್ನು ಮುಖ್ಯ ಅತಿಥಿಯಾದ ಮಂಗಳೂರಿನ ಅಭಿಮೊ ಟೆಕ್ನಾಲಜೀ ಮುಖ್ಯಸ್ಥ ಉಳ್ಳಾಲದ ನವೀನ್ ಅವರ ದಿವ್ಯ ಹಸ್ತದಿಂದ ಮತ್ತು ಪಿಂಗಾರ ಪತ್ರಿಕೆಯ ಮುಖ್ಯಸ್ಥ ರೇಮಂಡ್ ಡಿ ಕುನ್ಹ, ಕಥಾ ಬಿಂದು ಪ್ರಕಾಶನದ ಪಿ.ವಿ ಪ್ರದೀಪ್ ಕುಮಾರ್, ಕವಿಗೋಷ್ಠಿಯ ಅಧ್ಯಕ್ಷ ವೆಂಕಟೇಶ ಗಟ್ಟಿ ಹಾಗೂ ಸಂಚಾಲಕ ಡಾ ಸುರೇಶ್ ನೆಗಳಗುಳಿ ಸಹಿತವಾಗಿ ಜಂಟಿಯಾಗಿ ಕತ್ತರಿಸಲಾಯಿತು.


ಅನಂತರ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ದಾಖಲೆಯ ಎಂಟು ಭಾಷೆಗಳ ಕವನಗಳು ವಾಚಿಸಲ್ಪಟ್ಟವು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಡಾ. ವಾಣಿಶ್ರೀ ಕಾಸರಗೋಡು, ಲಕ್ಷ್ಮಿ ಬಿ ಎಸ್ ಹಿತೇಶ್ ಕುಮಾರ್ ನೀರ್ಚಾಲ್, ಮಂಜುಶ್ರೀ ನಲ್ಕ, ಡಾ ಸುರೇಶ ನೆಗಳಗುಳಿ ಮಂಗಳೂರು, ಗುರುರಾಜ್ ಎಂ ಆರ್,ರೇಖಾ ಸುದೇಶ್ ರಾವ್, ರೇಮಂಡ್ ಡಿ ಕುನ್ಹ,ಜಯಾನಂದ ಪೆರಾಜೆ, ರಶ್ಮಿ ಸನಿಲ್, ದೀಪಾ ಪಾವಂಜೆ, ಚಂದನಾ ಕಾರ್ತಟ್ಟು,, ಲಕ್ಷ್ಮಿ ಬಿ‌ಎನ್, ಸುಹಾನ ಸಮೀರ್, ಅರ್ಚನಾ ಕುಂಪಲ, ಪ್ರಕಾಶ ಪಡಿಯಾರ ಕುಂದಾಪುರ, ಸೌಮ್ಯ ಆರ್ ಶೆಟ್ಟ, ಜಯಲಕ್ಷ್ಮಿ ಶರತ್ ಶೆಟ್ಟಿ ಕತ್ತರಿ ಕೋಡಿ, ನವ್ಯ ಪ್ರಸಾದ್ ನೆಲ್ಯಾಡಿ, ಶರಣ್ಯ ಬೆಳುವಾಯಿ, ಅಶ್ವಿನಿ‌ ಕಡ್ತಲ, ಮನ್ಸೂರು ಮುಲ್ಕಿ, ಶಾಂತಾ ಪುತ್ತೂರು, ಸೋಮಶೇಖರ ಹಿಪ್ಪರಗಿ, ಸಂತೋಷ ಟಿ, ಗಂಗಾಧರ ಗಾಂಧಿ, ರಾಣಿ ಪುಷ್ಪಲತಾ, ಕುಮುದಾ ಬಿ., ಅರ್ಬನ್ ಡಿ ಸೋಜ, ಗೀತಾ ಲಕ್ಷ್ಮೀಶ್, ಅನುರಾದಾ ರಾಜೀವ್, ಸಹಿತ ಹಲವರು ಎಂಟು ಭಾಷೆಯ ಕವನಗಳನ್ನು ವಾಚಿಸಿದರು.


ಬಳಿಕ ಅಧ್ಯಕ್ಷ ಪೀಠದಿಂದ ಮಾತನಾಡುತ್ತ ವೆಂಕಟೇಶ ಗಟ್ಟಿಯವರು ಕಾವ್ದದ ರಚನೆಯು ಭಾವನೆಯೊಡನೆ ಸಮಾನುಪಾತದಲ್ಲಿದೆ. ಕಾವ್ಯವಾಗಲು ಕವಿಯು ಭಾವನೆಯ ಒಳಹೊಕ್ಕು ಕವನದ ಚೀಲವನ್ನು ತುಂಬಿಸಿ ಉತ್ತಮ ಶಿರೋನಾಮೆಯಿಂದ ಕಟ್ಟ ಬೇಕು. ಅದು ಭದ್ರ ಮತ್ತು ಜನಹಿತವಾಗಿರುತ್ತದೆ ಎನ್ನುತ್ತಾ ಕವಿಗಳ ಕವನದ ಬಗೆಗೆ ಸದಾಶಯ ವ್ಯಕ್ತ ಪಡಿಸಿ ತಮ್ಮ ಸ್ವರಚಿತ ಕವನ ವಾಚಿಸಿದರು. ಮುಂದುವರಿದು ಸಾಹಿತ್ಯದೊಡನಿರುವ ಅವರ ಸಂಬಂಧ ವನ್ನು ಎಳೆ ಎಳೆಯಾಗಿ ಅನಾವರಣ ಮಾಡಿದರು.


ಪಿ.ವಿ‌ ಪ್ರದೀಪ್ ಕುಮಾರ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಕೊನೆಗೊಂಡ ಕಾರ್ಯಕ್ರಮದ ಪೂರ್ಣ ನಿರ್ವಹಣೆಯನ್ನು ವಿಶಿಷ್ಟ ರೀತಿಯಲ್ಲಿ ಡಾ ಸುರೇಶ್ ನೆಗಳಗುಳಿಯವರು ನಿರ್ವಹಿಸಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم