ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಸರಗೋಡು ವಲಯದ ಡಿಸೆಂಬರ್ ತಿಂಗಳ ಶಾಸನತಂತ್ರ ಸಭೆ

ಕಾಸರಗೋಡು ವಲಯದ ಡಿಸೆಂಬರ್ ತಿಂಗಳ ಶಾಸನತಂತ್ರ ಸಭೆ


ಕಾಸರಗೋಡು: ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಶಾಸನ ತಂತ್ರದ ಮುಳ್ಳೇರಿಯ ಮಂಡಲಾಂತರ್ಗತ ಕಾಸರಗೋಡು ವಲಯದ ಡಿಸೆಂಬರ್ ತಿಂಗಳ ಮಾಸಿಕ ಸಭೆಯು ದಿನಾಂಕ 11/12/2021ರಂದು ಶನಿವಾರ ಕಾಸರಗೋಡು ನಗರದ ನುಳ್ಳಿಪ್ಪಾಡಿಯಲ್ಲಿರುವ ಹವ್ಯಕ ಸಭಾಭವನದಲ್ಲಿ ಕೋವಿಡ್ ಮಾನದಂಡಗಳನ್ನು ಪಾಲಿಸಿ ಜರುಗಿತು.


ಗುರುವಂದನೆ, ಶಿವಮಾನಸ ಪೂಜಾ ಸ್ತೋತ್ರ ಪಠಣದೊಂದಿಗೆ ವಲಯದ ಅಧ್ಯಕ್ಷ ಬಿ. ಮಹಾಬಲ ಭಟ್ ಅವರ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಯಿತು.


ವಲಯ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಅವರು ಗತ ಸಭೆಯ ವರದಿಯನ್ನು ವಾಚಿಸಿದರು. ಬಳಿಕ ನೂತನ ಪದಾಧಿಕಾರಿಗಳಿಗೆ ಶ್ರೀ ಗುರುಗಳ ಅನುಗ್ರಹ ಪೂರ್ವಕ ಮಂತ್ರಾಕ್ಷತೆ ಸಹಿತದ ನಿಯುಕ್ತಿ ಪತ್ರವನ್ನು ನೀಡಲಾಯಿತು.


ನೂತನ ಪದಾಧಿಕಾರಿಗಳು- ಅಧ್ಯಕ್ಷರು- ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ, ಉಪಾಧ್ಯಕ್ಷ- ಬೇತ ಮಹಾಬಲ ಭಟ್ ವಿದ್ಯಾನಗರ, ಕಾರ್ಯದರ್ಶಿ- ಉಳುವಾನ ಈಶ್ವರ ಭಟ್ ಕೂಡ್ಲು, ಸಂಘಟನಾ ಕಾರ್ಯದರ್ಶಿ- ಮಹೇಶ ಡಿ. ಎನ್. ಮನ್ನಿಪ್ಪಾಡಿ, ಕೋಶ ವಿಭಾಗ- ವೈ. ವಿ. ರಮೇಶ ಭಟ್ ವಿದ್ಯಾನಗರ, ಧರ್ಮ ಕರ್ಮ ವಿಭಾಗ- ಮಧುಶಂಕರ ಪಜ್ಯ ಮಧೂರು, ಮಾತೃ ವಿಭಾಗ- ವಂದನಾ ಎಸ್ ಭಟ್ ಧನ್ವಂತರಿ ನಗರ, ಸೇವಾ ವಿಭಾಗ- ಮುರಳಿ ಮೊಗ್ರಾಲ್, ಸಹಾಯ ವಿಭಾಗ- ವೈ. ಕೆ. ಗೋವಿಂದ ಭಟ್ ಪಾರೆಕಟ್ಟ, ಶಿಷ್ಯ ಮಾಧ್ಯಮ- ಈಶ್ವರ ಭಟ್ ಕಿಳಿಂಗಾರು ಎಡನೀರು, ವಿದ್ಯಾರ್ಥಿ ವಾಹಿನಿ- ಪುಷ್ಪಲತಾ ವಿ ಕೆ ಭಟ್ ಅಡ್ಕತ್ತಬೈಲು, ಬಿಂದು ಸಿಂಧು- ಗೀತಾ ಗೋವಿಂದ ಭಟ್ ಮನ್ನಿಪ್ಪಾಡಿ.

ತದನಂತರ ವಿಭಾಗಾವಾರು ವರದಿಯನ್ನು ಮಂಡಿಸಲಾಯಿತು. ಆ ಬಳಿಕ ಮಹಾಮಂಡಲದ ಕಾರ್ಯಸೂಚಿಯನ್ನು ವಾಚಿಸಲಾಯಿತು.


ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಘಟಕಕ್ಕೆ ಬಹುಮತದಿಂದ ಆಯ್ಕೆಯಾದ ಎಸ್. ವಿ. ಭಟ್, IMA ಯ ಯುವ ಮುಖಂಡರಿಗಿರುವ ರಾಷ್ಟ್ರೀಯ ಪ್ರಶಸ್ತಿ ವಿಜೇತ ಡಾ. ವೆಂಕಟ ತೇಜಸ್ವಿ, ISA ಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಕಾಸರಗೋಡಿನ ಡಾ. ವೆಂಕಟಗಿರಿ ಇವರುಗಳಿಗೆ ವಲಯದ ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಯಿತು ಹಾಗೂ ಮುಂದಿನ ವಲಯ ಸಭೆಯಲ್ಲಿ ಸನ್ಮಾನಿಸುವ ತೀರ್ಮಾನ ಕೈಗೊಳ್ಳಲಾಯಿತು.


ಗೋಮಾತೆಯ ಅನನ್ಯ ಸೇವೆಗೆ "ಅಮೃತ ಕನ್ನಡಿಗ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಬದಿಯಡ್ಕದ ಖ್ಯಾತ ಪಶುವೈದ್ಯ ಡಾ. ವೈ.ವಿ. ಕೃಷ್ಣಮೂರ್ತಿ ಅವರಿಗೆ ವಲಯದ ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.


ಶ್ರೀ ರಾಮಚಂದ್ರಾಪುರ ಮಠದ ಅಧೀನ ಸಂಸ್ಥೆ "ಗ್ರಾಮರಾಜ್ಯ" ಯೋಜನೆಯಡಿಯಲ್ಲಿ ರಾಸಾಯನಿಕ ರಹಿತ ಆಹಾರ ಪದಾರ್ಥಗಳು, ಕಲಬೆರಕೆ ರಹಿತ ಶುದ್ಧ ಉತ್ಪನ್ನ ಹಾಗೂ ನೈಸರ್ಗಿಕ, ಗೃಹೋತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕಾಸರಗೋಡು ಕರಂದಕ್ಕಾಡಿನಲ್ಲಿನ ಪತಂಜಲಿ ಅಂಗಡಿಯಿಂದ ಸಾಧನಗಳನ್ನು ಖರೀದಿಸಿ ಮಠದ ಉತ್ಪನ್ನಗಳನ್ನು ಪ್ರೋತ್ಸಾಹಿಸುವಂತೆ ಕರೆ ಕೊಡಲಾಯಿತು.


ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಶ್ರೀಯುತ ಮನ್ನಿಪ್ಪಾಡಿ ಮಹಾಲಿಂಗೇಶ್ವರ ಭಟ್ ಅವರು ಮಾತನಾಡಿ ಎಲ್ಲರೂ ಪರಸ್ಪರ ಸಹಕಾರದೊಂದಿಗೆ ಗುರು ಸೇವೆಯಲ್ಲಿ ನಿರತವಾಗುವ ವಿಜ್ಞಾಪನೆ ಮಾಡಿದರು.  ಬಳಿಕ ರಾಮತಾರಕ ಮಂತ್ರ, ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post