ಪುತ್ತೂರು: ಸವಣೂರಿನ ಹೆಸರಾಂತ ಕಲಾವಿದ ರಾಮಕೃಷ್ಣ ಸವಣೂರು ಅವರಿಗೆ ಶ್ರವಣಬೆಳಗೊಳದಲ್ಲಿ ನಡೆದ 12ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಯುವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಇದೇ ಸಂದರ್ಭದಲ್ಲಿ ಮಂಗಳೂರಿನ ದಿನೇಶ್ ರೈ ಕಡಬ (ಯಕ್ಷಗಾನ/ ತುಳು ಸೇವೆ), ಬೆಂಗಳೂರಿನ ರಾ. ರಾಧಾಕೃಷ್ಣ (ಬರವಣಿಗೆ/ ಪ್ರಕಾಶನ), ಉಡುಪಿಯ ಬಾ.ನಾ. ಶಾಂತಪ್ರಿಯ (ಮಾಧ್ಯಮ/ ಸೇವೆ), ಮಂಗಳೂರಿನ ಅರವಿಂದ್ ವಿವೇಕ್ (ಸಂಗೀತ/ ಪ್ರಚಾರ), ಯೋಗಾನಂದ ಹೊನ್ನೇನಹಳ್ಳಿ (ಮಾಧ್ಯಮ/ ಸೇವೆ), ಹಾವೇರಿಯ ಈರಣ್ಣ ಕುರುವತ್ತಿ ಗೌಡರ್ (ಸಾಹಿತ್ಯ/ ಕಾರ್ಮಿಕ), ಶ್ರವಣಬೆಳಗೊಳದ ಜಯಂತಿ ಚಂದ್ರಶೇಖರ್ (ಸಾಹಿತ್ಯ), ಬಳ್ಳಾರಿಯ ಡಿ.ಜಿ ತಿರುಮಲ (ಕಲೆ/ ರಂಗಭೂಮಿ), ರೇಶ್ಮಾ ಶೆಟ್ಟಿ (ಸಾಹಿತ್ಯ/ ಮಹಿಳೆ), ಸದಾನಂದ ಸಾಲ್ಯಾನ್ ಕೆರ್ವಾಸೆ (ದೈವಾರಾಧನೆ/ ಸಾಧನೆ), ಬೆಂಗಳೂರಿನ ಡಾ. ಸಲೀಮ ನದಾಫ್ (ವೈದ್ಯಕೀಯ ಸಾಹಿತ್ಯ), ಪಂಕಜ ಗೊರೂರು (ಸಾಹಿತ್ಯ/ ಮಾಧ್ಯಮ), ಕೃಷ್ಣಪ್ಪ ಸೊಪ್ಪಿನ ಲಿಂಹನಾಯಕನ ಹಳ್ಳಿ (ಕೃಷಿ/ ಸೇವೆ), ಮೂಡುಬಿದಿರೆಯ ಟ್ಯಾಲೆಂಟ್ ರಾಜೇಶ್ ಭಟ್ (ಸಂಗೀತ ನೃತ್ಯ), ಮಂಗಳೂರಿನ ಶ್ರೀನಿವಾಸ ಪೆಜತ್ತಾಯ (ಶಿಕ್ಷಣ/ ಮಾಧ್ಯಮ), ರೂಪಾ ವಸುಂಧರ ಆಚಾರ್ಯ ಪಡುಬಿದ್ರೆ (ಹೂವಿನ ಸಂಯೋಜನೆ, ಕಲೆ), ಬೆಳಗಾವಿಯ ಸಿದ್ರಾಮ ಮಹಾದೇವ ನಿಲಜಗಿ (ಸಂಘಟನೆ), ಮಂಗಳೂರಿನ ರೇಡಿಯೋ ಜಾಕಿ ಅಭಿಷೇಕ್ ಜೆ ಶೆಟ್ಟಿ ಪಡೀಲ್, ಟ್ಯಾಟ್ಸನ್ ಪಿರೇರಾ (ಸಿನಿಮಾ/ ಮಾಧ್ಯಮ), ಬಾಲಕೃಷ್ಣ ಶೆಟ್ಟಿ ಹೆಬ್ರಿ (ಛಾಯಾಗ್ರಹಣ. ಸಮಾಜಸೇವೆ), ಉಮಾಧರ ವಿಶ್ವಕರ್ಮ ಕಾರ್ಕಳ (ದೇವಾಲಯ ಕಾಷ್ಠಶಿಲ್ಪ), ಸಚಿನ್ ಪ್ರಕಾಶ ನಾಯಕ್ (ಸಿನಿಮಾ), ಭಾರತಿ ಎಚ್.ಎಲ್ ಹಾಸನ (ಕ್ರೀಡೆ/ ಸಂಘಟನೆ), ಪದ್ಮಶ್ರೀ ನಿಡ್ಡೋಡಿ (ಮಕ್ಕಳಿಗೆ ಪ್ರೋತ್ಸಾಹ), ಶುಭ್ರತಾ ಪಿ, ಚನ್ನರಾಯಪಟ್ಟಣ (ಭರತನಾಟ್ಯ), ಚೈತ್ರ ಕಬ್ಬಿನಾಲೆ ಹೆಬ್ರಿ (ಕವಿತೆ/ ನಿರೂಪಣೆ) ಅವರಿಗೂ ಕರ್ನಾಟಕ ಯುವ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಶ್ರವಣಬೆಳಗೊಳದ ಜೈನಮಠದ ಆವರಣದ ತುಳುವ ವೇದಿಕೆಯಲ್ಲಿ ಶನಿವಾರ (ಡಿ.18) ನಡೆದ ಸಮ್ಮೇಳನವನ್ನು ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉದ್ಘಾಟಿಸಿದರು. ತುಮಕೂರಿನ ಹಿರಿಯ ವಿದ್ವಾಂಸ ಡಾ. ಎಸ್.ಪಿ ಪದ್ಮಪ್ರಸಾದ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.
ಅ.ಭಾ. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಡಾ. ಶೇಖರ ಅಜೆಕಾರು ಸಭಾಧ್ಯಕ್ಷತೆ ವಹಿಸಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق