ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಡಾನೆ ದಾಳಿಗೊಳಗಾದ ರೈತರಿಗೆ ವಿಮಾ ಪರಿಹಾರ

ಕಾಡಾನೆ ದಾಳಿಗೊಳಗಾದ ರೈತರಿಗೆ ವಿಮಾ ಪರಿಹಾರ

ಸುಳ್ಯ: ಹರಿಹರ ಪಲ್ಲತಡ್ಕದ ಬಾಳುಗೋಡಿನ ಕೆ.ವಿ ಸುಧೀರ್ ಅವರ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿ , 40 ವರ್ಷದ ಹಳೆಯ ತೆಂಗಿನ ಮರವನ್ನು ನಾಶಮಾಡಿವೆ.

ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯ ವತಿಯಿಂದ ಇವರಿಗೆ ಬೆಳೆ  ನಷ್ಟ ವಿಮೆಯನ್ನು ನೀಡಿದೆ.

ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಘ ರೈತರಿಗಾಗಿಯೇ ಸ್ಥಾಪಿತವಾದ ಸಂಸ್ಥೆಯಾಗಿದ್ದು ರೈತ ಕುಟುಂಬದ ಮಕ್ಕಳಿಗೆ ಉದ್ಯೋಗ ಅವಕಾಶವನ್ನು, ಬಡರೈತರಿಗೆ ಅನೇಕ ಯೋಜನೆಗಳನ್ನು ಹಾಗೂ ತೆಂಗು ಮತ್ತು ಅಡಿಕೆ ತೆಗೆಯುವ ಕಾರ್ಮಿಕ ವರ್ಗದವರನ್ನು ಗುರುತಿಸಿ ರೂಪಾಯಿ 25ಲಕ್ಷದವರೆಗಿನ ವಿಮೆ ಸೌಲಭ್ಯ ಒದಗಿಸಿದೆ.

ಕೆ.ವಿ ಸುಧೀರ್ ಎಂಬವರು ಈ ಸಂಸ್ಥೆಯಲ್ಲಿ ಆರು ತಿಂಗಳ ಹಿಂದೆ ನೋಂದಾವಣಿ ಮಾಡಿದುದರಿಂದ ಇವರಿಗೆ ಬೆಳೆ ನಷ್ಟ ವಿಮೆಯನ್ನು ನೀಡಲಾಗಿದೆ.

0 تعليقات

إرسال تعليق

Post a Comment (0)

أحدث أقدم