ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿಂಜಾವೇ ಮೇಕೇರಿ ಘಟಕದಿಂದ ಜ. ಬಿಪಿನ್ ರಾವತ್‌ ಸಹಿತ ಹುತಾತ್ಮ ಸೇನಾಧಿಕಾರಿಗಳಿಗೆ ನಮನ

ಹಿಂಜಾವೇ ಮೇಕೇರಿ ಘಟಕದಿಂದ ಜ. ಬಿಪಿನ್ ರಾವತ್‌ ಸಹಿತ ಹುತಾತ್ಮ ಸೇನಾಧಿಕಾರಿಗಳಿಗೆ ನಮನ


ಮಡಿಕೇರಿ: ಹಿಂದು ಜಾಗರಣ ವೇದಿಕೆ ಛತ್ರಪತಿ ಘಟಕ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ಮೇಕೇರಿ ಇವರ ಆಯೋಜನೆಯಲ್ಲಿ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ನಮ್ಮನ್ನಗಲಿದ ಈ ದೇಶದ ಸೇನಾಪಡೆಗಳ ಮಹಾದಂಡನಾಯಕರಾದ ಬಿಪಿನ್ ರಾವತ್ ಮತ್ತವರ ಧರ್ಮಪತ್ನಿ ಹಾಗೂ ಹುತಾತ್ಮರಾದ ಸೇನೆಯ ಎಲ್ಲಾ ಸೇನಾಧಿಕಾರಿಗಳು ಮತ್ತು ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಶ್ರೀ ಗೌರಿಶಂಕರ ದೇವಾಲಯದ ಹಿರಿಯ ಟ್ರಸ್ಟಿಗಳಾದ ಕಾಯರ ಬೆಳ್ಯಪ್ಪರವರು ಮಾತನಾಡಿ ನಮ್ಮ ದೇಶದ ಸೇನೆಗಾಗಿ ಅಪಾರ ಕೊಡುಗೆ ನೀಡಿದ ಸೇನೆಯ ಮಹಾ ದಂಡನಾಯಕನನ್ನು ಕಳೆದುಕೊಂಡು ನಮ್ಮ ದೇಶ ಬಡವಾಗಿದ್ದು ಅವರ ಕರ್ತವ್ಯನಿಷ್ಠೆಯಲ್ಲಿನ ಆದರ್ಶಗಳು ಇಡೀ ದೇಶಕ್ಕೇ ಮಾದರಿಯಾಗಿದೆಯೆಂದರು.


ಕಾರ್ಯಕ್ರಮದಲ್ಲಿ ಹಿಂ.ಜಾ.ವೇ. ಸ್ಥಳೀಯ ಘಟಕದ ಕಾರ್ಯಕರ್ತರು ದೇವಾಲಯ ಸಮಿತಿ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم