ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೆಮ್ಮೆಯ ವೀರ ಸೇನಾನಿ

ಹೆಮ್ಮೆಯ ವೀರ ಸೇನಾನಿ



 ಓ...... ಹೆಮ್ಮೆಯ ವೀರಸೇನಾನಿ......

ಇಡೀ  ದೇಶವೇ ಇಂದು ನಿಮಗಾಗಿ  ಮಿಡಿಯುತ್ತಿದೆ ಕಂಬನಿ

 ನಿಮ್ಮ ಅಗಲಿಕೆಗೆ ಮೌನ ತಾಳಿರುವಳು  ಜನನಿ

 ಭಾರತಾಂಬೆಗೆ ಅರ್ಪಿಸಿರುವೆ ನಿನ್ನ ಪ್ರಾಣವ ನೀ||


ತಮಿಳುನಾಡಿನ ಕುನೂರ್ ಬಳಿ ಅನಿರೀಕ್ಷಿತವಾಗಿ ನಡೆಯಿತು ಹೆಲಿಕಾಪ್ಟರ್ ಪತನ

ವಿಧಿಯೇ ನೀ ಮಾಡಿದ್ದು ಇದು ಸರೀನಾ?

ಕ್ಷಮಿಸಲಾರೆ ನಾ ನಾ ತಪ್ಪನ್ನ

ಕಾರಣ ರಾಷ್ಟ್ರ ಕಳೆದುಕೊಂಡಿದೆ ಮಹಾನ್ ಯೋಧರನ್ನ||



ಸುಮಾರು ೧೩ ಸೇನಾ ಸಿಬ್ಬಂದಿಗಳು ಹುತ್ಮಾತರಾದರು

ಅವರಲ್ಲಿ ಭಾರತೀಯ ಸೇನೆಯ ೩ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಕೂಡ ಒಬ್ಬರು||


ಹುತಾತ್ಮ ಯೋಧರೇ ನಿಮಗೆ ನನ್ನ ಶತಕೋಟಿ ನಮನ

ತೀರಿಸಲಾಗದು ನಿಮ್ಮ ತ್ಯಾಗದ ಋಣ||

೨೦೨೦ರಲ್ಲಿ ಸೇನಾ ಸಿಬ್ಬಂದಿಯಾಗಿ ನೇಮಕ

ದೇಶಕ್ಕಾಗಿ ತನ್ನ ಪ್ರಾಣವನ್ನು  ಮುಡಿಪಾಗಿಟ್ಟ ಸೈನಿಕ||


ರಾಷ್ಟ್ರ ಪ್ರೇಮಿಗಳಿಗೆ ನಿಮ್ಮ, ತ್ಯಾಗ, ಬಲಿದಾನಗಳು ಮಾದರಿ

ಅಗಲಿದ ವೀರರ ಆತ್ಮಕ್ಕೆ ಸದ್ಗತಿಯನ್ನು ಆ  ಭಗವಂತ ಕರುಣಿಸಲಿ

ವೀರರೇ ಮಗದೊಮ್ಮೆ  ಈ ಪುಣ್ಯ ಭೂಮಿಯಲ್ಲಿ ಹುಟ್ಟಿ ಬನ್ನಿರಿ||


ವಂದೇ ಮಾತರಂ

ಮಡಿದ ಎಲ್ಲಾ ಸೈನಿಕರಿಗೆ ನನ್ನದೊಂದು ಸಲಾಂ||


✍️ ಸಂಧ್ಯಾ ಕುಮಾರಿ ಎಸ್, ವಿಟ್ಲ

ಅರ್ಥಶಾಸ್ತ್ರ ಉಪನ್ಯಾಸಕಿ, ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ.

0 تعليقات

إرسال تعليق

Post a Comment (0)

أحدث أقدم