ಹೊಸ ಯೋಚನೆ, ಹೊಸ ಹುಮ್ಮಸ್ಸು ಹೊಸ ಹುರುಪುಗಳ ಆದಿಯೇ ಹೊಸವರ್ಷ. 2021ಕ್ಕೆ ವಿದಾಯ ಹೇಳಿ 2022ಕ್ಕೆ ಕಾಲಿಡುತ್ತಿದ್ದೇವೆ. ಒಂಥರಾ ಭಾವುಕ, ಭಾವನಾತ್ಮಕ ಕ್ಷಣ ಇದಾಗಿದೆ. ಹಾಗೆ ಯೋಚಿಸಿದರೆ ಪ್ರತೀ ವರ್ಷ ಸರಿಯುವ ಕ್ಷಣ ಮನಸ್ಸಲ್ಲೇನೋ ನೋವು ತರುತ್ತದೆ. ಹಾಗೆಂದು ಸುಮ್ಮನೆ ನೊಂದು ಕುಳಿತು ಯಾವುದೇ ಫಲವಿಲ್ಲ. ಬದುಕಿನ ಹೊಸ ಪುಟ, ಹೊಸ ಅಧ್ಯಾಯ ಆರಂಭಿಸಲು ಇದು ಉತ್ತಮ ಅವಕಾಶ ಈ ಹೊಸ ವರ್ಷ. ಹೊಸ ಉಲ್ಲಾಸ ಹೊಸ ಹುರುಪು ಹೊಸ ಚೈತನ್ಯ, ಹೊಸ ವಿಶ್ವಾಸ, ತುಂಬಲು ಹೊಸ ವರ್ಷ ಕಾತರದಿಂದ ಕಾಯ್ದಿರುತ್ತದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಇದು ಹೊಸ ಯೋಚನೆಗಳಿಗೆ ಬುನಾದಿ ಈ ಹೊಸ ವರ್ಷ ಎನ್ನುವುದರಲ್ಲಿ ತಪ್ಪಿಲ್ಲ. ಇದು ನಮ್ಮ ಜೀವನದ ಹೊಸ ಅಧ್ಯಾಯ ಎಂದೇ ಹೇಳಬಹುದು. 2021ಕ್ಕೆ ವಿದಾಯ... 2022ಕ್ಕೆ ಸ್ವಾಗತ... ಮತ್ತೆ ನಮ್ಮ ಬದುಕಿನ ಹೊಸ ಅಧ್ಯಾಯ ಆರಂಭ. ಹೊಸ ಹುರುಪು, ಹೊಸ ಉಲ್ಲಾಸ, ಹೊಸ ಖುಷಿ, ಹೊಸ ಆಲೋಚನೆಗಳು, ಹೊಸ ತಿಂಗಳು... ಹೀಗೆ ಎಲ್ಲವೂ ಹೊಸತು. ಇಲ್ಲಿಂದ ನಮ್ಮ ಬದುಕಿನ ಪುಸ್ತಕದ ಹೊಸ ಪುಟ ಆರಂಭವಾಗುತ್ತದೆ.
ಸಮಯ ಎಂಬುದು ಬಲು ಅಮೂಲ್ಯ. ಕಳೆದು ಹೋದ ಕ್ಷಣ ಮತ್ತೆ ಸಿಗದು. ಹೀಗಾಗಿ, ಈ ಬದುಕಿನ ಹೊಸ ಪುಟದಲ್ಲಿ ಯಶಸ್ಸು, ಖುಷಿ, ಶಾಂತಿ, ನೆಮ್ಮದಿಯ ನೆನಪುಗಳೇ ದಾಖಲಾಗುವಂತೆ ಮಾಡುವುದು ಮುಖ್ಯ. ಈ ಬಗ್ಗೆ ನಾವು ನಮ್ಮ ದೃಷ್ಟಿಯನ್ನು ನೆಡಬೇಕಾಗಿದೆ.
ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್ ಬದಲಾಯಿಸಿದರೆ ಮಾತ್ರ ಸಾಲದು. ನಮ್ಮ ಬದುಕಿನ ಸಿಂಹಾವಲೋಕನದ ಸಮಯವದು. ಕಳೆದ ವರ್ಷ ನಾವು ಕಲಿತ ಬದುಕಿನ ಪಾಠಗಳನ್ನು ಅಳವಡಿಸಿಕೊಳ್ಳುವುದು, ತಪ್ಪು ಹೆಜ್ಜೆ ಇಡದಂತೆ ಎಚ್ಚರವಹಿಸುವುದು, ಕಳೆದ ವರ್ಷದ ಒಳ್ಳೆಯದಾವುದು...? ಕೆಟ್ಟದಾವುದು ಎಂಬ ವಿಮರ್ಶೆಯೊಂದಿಗೆ ನಮ್ಮ ಬದುಕನ್ನು ನಾವು ರೂಪಿಸಿಕೊಂಡರೆ ಬದುಕಿನಲ್ಲಿ ಪ್ರಗತಿ ಕಾಣಲು ಸಾಧ್ಯ. ಅಂತಹ ವಿಮರ್ಶೆಯನ್ನು ಮಾಡಿಕೊಳ್ಳುವ, ಭವಿಷ್ಯದ ಹೊಸ ಹೆಜ್ಜೆಯನ್ನು ಇಡುವಂತಹ ಸಂದರ್ಭ ಈಗ ಬಂದಿದೆ.
ಇದು ಬರೀ ಹೊಸ ಕ್ಯಾಲೆಂಡರನ್ನು ಮನೆಯ ಗೋಡೆಗಳಲ್ಲಿ ತೂಗು ಹಾಕಿ ದಿನಗಳೆಯುವ ಹೊತ್ತಲ್ಲ. ಹೊಸ ದಿನಗಳನ್ನು ಸದ್ವಿನಿಯೋಗ ಮಾಡುವ ಕ್ಷಣ. ಸಂಚಾರೀ ವಾಣಿಗಳ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವರ್ಷದ ನವನವೀನ ಸಂದೇಶಗಳು ಮುತ್ತಿಕ್ಕುತ್ತವೆ. ಕೆಲವರು ಹೊಸ ವರುಷದ ಪಾರ್ಟಿ ಮಾಡಲು ಹಾತೊರೆಯುತ್ತಿದ್ದರೆ ಇನ್ನು ಕೆಲವರು ಹೊಸ ವರ್ಷದ ಸಂದೇಶಗಳನ್ನು ಛಾಯಾಚಿತ್ರಗಳನ್ನು ಹಂಚಿಕೊಳ್ಳಲು ಹಾತೊರೆಯುತ್ತಾರೆ. ನಮ್ಮ ಪ್ರೀತಿ ಪಾತ್ರರೊಂದಿಗೆ ಸೇರಿ ಈ ವರ್ಷವನ್ನು ಸಂಭ್ರಮದಿಂದ ಹೊಸತನದಿಂದ ಈ ವರ್ಷಾಚರಣೆ ಮಾಡೋಣ, ಅಂತೆಯೇ ನಮ್ಮ ಆಸೆಗಳನ್ನು ಇದು ಹುಸಿಗೊಳಿಸದಿರಲಿ.
-ಕಾರ್ತಿಕ್ ಕುಮಾರ್.ಕೆ
ದುರ್ಗಾನಿಲಯ ಏತಡ್ಕ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment