ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಇನ್ನು ಮುಂದೆ ಕೋ ಎಜುಕೇಶನ್

ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಇನ್ನು ಮುಂದೆ ಕೋ ಎಜುಕೇಶನ್


ಮಂಗಳೂರು:
ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜು ಭಾರತದ ಪಶ್ಚಿಮ ಕರಾವಳಿಯ ಮೊದಲ ಮಹಿಳಾ ಕಾಲೇಜು ಮತ್ತು ದೇಶದ ಮೊದಲ ಕ್ಯಾಥೊಲಿಕ್ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಮುಂದಿನ ವರ್ಷದಿಂದ ಅಲ್ಲಿ ಹುಡುಗರ ಶಿಕ್ಷಣಕ್ಕೂ ಅವಕಾಶ ಕಲ್ಪಿಸಿಕೊಡಬೇಕೆಂದು ತೀರ್ಮಾನಿಸಲಾಗಿದೆ.

100 ವರ್ಷಗಳಿಗೂ ಹೆಚ್ಚು ಕಾಲ ಮಂಗಳೂರಿನ ಮೊದಲ ಮಹಿಳಾ ಕಾಲೇಜು ಎಂದೇ ಗುರುತಿಸಲ್ಪಟ್ಟಿರುವ ಸೇಂಟ್ ಆಗ್ನೆಸ್ ಕಾಲೇಜಿಗೆ ಇನ್ನು ಮುಂದೆ ಹುಡುಗರು ಕೂಡ ಪ್ರವೇಶ ಪಡೆಯಲಿದ್ದಾರೆ. 2022 ರಲ್ಲಿ ಹುಡುಗರಿಗೂ ಇಲ್ಲಿ ಶಿಕ್ಷಣ ಕಲಿಯಲು ಅನುಮತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಎ ಪ್ಲಸ್ ನ್ಯಾಕ್ ಗ್ರೇಡ್ ಪಡೆದು ಸ್ನಾತಕೋತ್ತರ ಶಿಕ್ಚಣ ಆರಂಭಿಸಿದ ಈ ಕಾಲೇಜು 2007-08 ರಲ್ಲಿ ಯುಜಿಸಿ ಈ ಕೇಂದ್ರಕ್ಕೆ ಆಟೋನೊಮಾಸ್ ಮಾನ್ಯತೆಯನ್ನೂ ನೀಡಿತ್ತು.

0 Comments

Post a Comment

Post a Comment (0)

Previous Post Next Post