ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಾಲಕನನ್ನು ಕೊಲೆ ಮಾಡಿದ ಸ್ನೇಹಿತರು

ಬಾಲಕನನ್ನು ಕೊಲೆ ಮಾಡಿದ ಸ್ನೇಹಿತರು

 


ದೇವಗಢ: 14 ವರ್ಷ ವಯಸ್ಸಿನ ಬಾಲಕನನ್ನು ಆತನ ಸ್ನೇಹಿತರೇ ಗಂಟಲು ಸೀಳಿ, ಕೈ-ಕಾಲುಗಳನ್ನು ಕತ್ತರಿಸಿ ಶವವನ್ನು ಗೋಣಿಚೀಲದಲ್ಲಿ ಹಾಕಿ ಅರಣ್ಯವೊಂದರಲ್ಲಿ ಎಸೆದಿರುವ ಭೀಕರ ಘಟನೆ ಝಾರ್ಖಂಡ್‍ನ ದೇವಗಢ ಜಿಲ್ಲೆಯಲ್ಲಿ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಬಾಲಕ ಹಿಂದಿನ ರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾನೆಂದು ಅವನ ಕುಟುಂಬ ಬುಧವಾರ ದೂರು ನೀಡಿದ್ದರು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಪವನ್‍ಕುಮಾರ್ ಹೇಳಿದ್ದಾರೆ.

ಮೂವರೂ ಪಲಂಗಾ ಪಹಾಡ್ ಅರಣ್ಯಕ್ಕೆ ಹೋದರು. ಅಲ್ಲಿ ಅವಿನಾಶ್ ಮತ್ತು ಮೃತ ಬಾಲಕನ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಯಿತು.

ಕೂಡಲೇ ಅವಿನಾಶ್ ಕತ್ತಿಯೊಂದನ್ನು ತೆಗೆದುಕೊಂಡು ಬಾಲಕನನ್ನು ಇರಿದು, ಗಂಟಲು ಸೀಳಿ ಕೊಲೆಗೈದು ಅನಂತರ ಆತನ ಕೈಕಾಲುಗಳನ್ನು ಕತ್ತರಿಸಿ ಶರೀರದ ಭಾಗಗಳನ್ನು ಮೂರು ಗೋಣಿಚೀಲಗಳಲ್ಲಿ ಹಾಕಿ ಕಾಡಿನಲ್ಲಿ ಎಸೆದಿದ್ದಾಗಿ ತಿಳಿದುಬಂದಿತು ಎಂದು ಕುಮಾರ್ ನುಡಿದಿದ್ದಾರೆ.

ಶವವನ್ನು ವಶಪಡಿಸಿಕೊಂಡ ಪೊಲೀಸರು ಅವಿನಾಶ್‍ನನ್ನು ಬಂಧಿಸಿದ್ದಾರೆ. ಅವಿನಾಶ್ ಕೂಡ ತಪ್ಪು ಒಪ್ಪಿಕೊಂಡಿದ್ದು, ರಕ್ತದ ಕತ್ತಿ ಮತ್ತು ಕೊಲೆಯಾದ ಬಾಲಕನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕುಮಾರ್ ವಿವರಿಸಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم