ಮಂಗಳೂರು: ಶಿವಳ್ಳಿ ಸ್ಪಂದನ (ರಿ) ಮಂಗಳೂರು ಇದರ ದೇರೆಬೈಲ್ ಮತ್ತು ಕಾವೂರು ವಲಯಗಳು ಜಂಟಿಯಾಗಿ ಭಾನುವಾರ (ಡಿ.5) ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 200ಕ್ಕೂ ಅಧಿಕ ಮಂದಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.
ಡಾ. ಯೋಗೀಶ್ ಮತ್ತು ಡಾ. ಸದಾಶಿವ ಪೋಳ್ನಾಯ ಅವರ ನಿರ್ದೇಶನದಲ್ಲಿ ಕಾವೂರಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರೂ ರಕ್ತಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಮತ್ತು ಕಣ್ಣಿನ ಪರೀಕ್ಷೆಗಳನ್ನು ಮಾಡಿಸಿಕೊಂಡು ಅಗತ್ಯ ಸಲಹೆಗಳನ್ನು ಪಡೆದರು. 53 ಮಂದಿ ಇಸಿಜಿ ಪರೀಕ್ಷೆ (ಹೃದಯ ತಪಾಸಣೆ) ಮಾಡಿಸಿಕೊಂಡರು. 48 ಮಂದಿಗೆ ಕೊರೋನಾ ಲಸಿಕೆಗಳನ್ನು ಹಾಕಲಾಯಿತು.
ನೀಟ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಮಾಜ ಬಾಂಧವರಿಗೆ ಮತ್ತು ಸಾರ್ವಜನಿಕರಿಗೆ ಸೇವಾ ರೂಪದಲ್ಲಿ ಸಹಕರಿಸಿದ ಎಕ್ಕೂರು ವಲಯದ ಶ್ರೀಮತಿ ಮತ್ತು ಶ್ರೀ ದಿವಾಕರ ರವರ ಮಗಳು ಡಾಕ್ಟರ್ ಕುಮಾರಿ ಶ್ರೀ ರಕ್ಷಾ ರವರು ಪ್ರಥಮದಲ್ಲೇ ಹಿರಿಯ ತಜ್ಞ ವೈದ್ಯರ ಸಮ್ಮುಖದಲ್ಲಿ ಬೆಳಿಗ್ಗೆಯಿಂದಲೇ ರಕ್ತದೊತ್ತಡ ಪರೀಕ್ಷೆ ಮಾಡಿ ಸಹಕರಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಸಂಘಟನೆಯ ಪದಾಧಿಕಾರಿಗಳ ಪರವಾಗಿ ಶಿವಳ್ಳಿ ಸ್ಪಂದನ ದೇರೆಬೈಲು ವಲಯದ ಕಾರ್ಯದರ್ಶಿ ರಘುರಾಮ ರಾವ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ನಗರದ ಪ್ರಖ್ಯಾತ ಹಿರಿಯ ತಜ್ಞ ವೈಧ್ಯರಾದ ಡಾ. ಸದಾಶಿವ ಪೋಳ್ನಾಯ, (M.B.B.S , S.K.Clinic, Ullala. Family Phisician / ಮಧುಮೇಹ ರೋಗಗಳ ತಜ್ಞರು), ಡಾ. ಯೋಗೀಶ್ ಕೆ (M.B.B.S , DLO(ENT) AFIH, Chirayu Clinic, Kavoor. E.N.T, / ಕಿವಿ, ಮೂಗು, ಗಂಟಲು, ರೋಗಗಳ ತಜ್ಞರು), ಡಾ. ಜೆ. ಎನ್ ಭಟ್ (M.B.B.S , FACA, AFIH, Consultant Phisician and Medical Officers Indian Red Cross Society, Mangalore / ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ - ಡಾಕ್ಟರು), ಡಾ. ಶಶಿಕಲಾ ರಾವ್ (M.S (Ophtho) consultant Ophthalmologist, SDM Eye Hospital, Mangalore. ನೇತ್ರ ತಜ್ಞರು.), ಡಾ. ಕೆ. ಸುಬ್ರಹ್ಮಣ್ಯ (MD, DNB, FACC, Professor and HOD, Dept. Of Cardiology K.S.Hegde Charitable Hospital, Deralakatte / ಹೃದಯ ರೋಗಗಳು ತಜ್ಞರು), ಡಾ. ಅಣ್ಣಯ್ಯ ಕುಲಾಲ್, (B.Sc, M.B.B.S Nodal office, Covid-19 Vaccination and Maleria Department, City Corporation Mangalore), ಡಾ. ಸಾವಿತ್ರಿ ರಾವ್, (BAMS, ವೈದ್ಯಾಧಿಕಾರಿ ಕುಂಜತ್ತಬೈಲು ಆರೋಗ್ಯ ಕೇಂದ್ರ / Medical Officers under Kunjathabail PHC.) ಭಾಗವಹಿಸಿ ಆರೋಗ್ಯ ತಪಾಸಣಾ ಶಿಬಿರ ನಡೆಸಿಕೊಟ್ಟರು.
ಗಣ್ಯರಾದ ಪ್ರದೀಪ್ ಕುಮಾರ್ ಕಲ್ಕೂರ, ಧಾರ್ಮಿಕ ಪರಿಷತ್ ಸದಸ್ಯರಾದ ಗಿರಿಪ್ರಕಾಶ ತಂತ್ರಿ, ಪ್ರಕಾಶ ಹೊಳ್ಳ, ಅಧ್ಯಕ್ಷರು, ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ, ಮಂಗಳೂರು ಪಾಲ್ಗೊಂಡಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق