ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀ ವಿಷ್ಣು ಯುವ ಶಕ್ತಿ ಬಳಗದಿಂದ ಇ ಶ್ರಮ‌ ಯೋಜನೆಯ ಉಚಿತ ಬೃಹತ್ ನೋಂದಣಿ ಮತ್ತು ವಿತರಣಾ ಕಾರ್ಯಕ್ರಮ

ಶ್ರೀ ವಿಷ್ಣು ಯುವ ಶಕ್ತಿ ಬಳಗದಿಂದ ಇ ಶ್ರಮ‌ ಯೋಜನೆಯ ಉಚಿತ ಬೃಹತ್ ನೋಂದಣಿ ಮತ್ತು ವಿತರಣಾ ಕಾರ್ಯಕ್ರಮ

 


ಪುತ್ತೂರು: ಕೇಂದ್ರ ಸರಕಾರದ ಇ ಶ್ರಮ ಯೋಜನೆಯ  ಬೃಹತ್ ಉಚಿತ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮ  ಮತ್ತು ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ  ಡಿಸೆಂಬರ್ 19 ರಂದು ಮಜ್ಜಾರಡ್ಕದಲ್ಲಿ ನಡೆಯಿತು.

ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವ ಜನ ಒಕ್ಕೂಟ (ರಿ) ಪುತ್ತೂರು, ಇವುಗಳ ಸಹಯೋಗದೊಂದಿಗೆ ಶ್ರೀ ವಿಷ್ಣು ಯುವ ಶಕ್ತಿ ಬಳಗ (ರಿ) ಮಜ್ಜಾರಡ್ಕ,ಗ್ರಾಮ‌ಪಂಚಾಯತ್ ಅರಿಯಡ್ಕ, ರಿತಿಕಾ ಜನಸೇವಾ ಕೇಂದ್ರ ತಿಂಗಳಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ದಿನೇಶ್ ಸಾಲ್ಯಾನ್ ಇವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಕಾರ್ಯಕ್ರಮ ಅತಿಥಿಯಾಗಿ ಆಗಮಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಇದರ ಮೇಲ್ವಿಚಾರಕರು ಆಗಿರುವ ಶ್ರೀಕಾಂತ್ ಪೂಜಾರಿ ಬಿರಾವು ಕೇಂದ್ರ ಸರಕಾರದ ಈ ಶ್ರಮ ಯೋಜನೆಯ  ಪ್ರಯೋಜನವನ್ನು ತಿಳಿಸಿದರು. ರಿತಿಕಾ ಜನಸೇವಾ ಕೇಂದ್ರ ತಿಂಗಳಾಡಿ ಇದರ ಶ್ರೀ ಕೃಷ್ಣಪ್ಪ ಇವರು ಮಾತನಾಡಿ ಈಗಾಗಲೇ 225ಕ್ಕೂ ಹೆಚ್ಚು ಇ ಶ್ರಮ ಕಾರ್ಡ್‌ಗಳ ನೋಂದಣಿ ಶ್ರೀ ವಿಷ್ಣು ಯುವ ಶಕ್ತಿ ಬಳಗ (ರಿ) ಮಜ್ಜಾರಡ್ಕ ವತಿಯಿಂದ ನಡೆದಿದ್ದು, ಇನ್ನೂ ನೋಂದಣಿ ಮಾಡುವವರಿಗೆ ಡಿಸೆಂಬರ್ 30 ರ ತನಕ ಅವಕಾಶವನ್ನು ಸಂಘಟನೆಯ ಮೂಲಕ ಕಲ್ಪಿಸಲಾಗಿದೆ ಎಂದರು.

ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಪ್ರಜ್ಞಾ ಕುಲಾಲ್ ಕಾವು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಅರಿಯಡ್ಕ ಸದಸ್ಯ ಶ್ರೀಮತಿ ಉಷಾ ರೇಖಾ ರೈ, ಶ್ರೀ ವಿಷ್ಣು ಯುವ ಶಕ್ತಿ ಬಳಗ (ರಿ) ಮಜ್ಜಾರಡ್ಕ  ಇದರ ಅಧ್ಯಕ್ಷ ರವಿ ಮಾಜ್ಜಾರ್, ಸಂಘಟನೆ ಕಾರ್ಯದರ್ಶಿ ರಾಜೇಶ್ ಕೆ ಮಯೂರ, ಬೆಂಗಳೂರು ಉದ್ಯಮಿ ಲಂಬೋದರ ಪೂಂಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಅಭಿಯಾನದ ಪ್ರಮಾಣ ಪತ್ರ ವಿತರಣೆ ಮತ್ತು ಕೇಂದ್ರ ಸರಕಾರದ ಇ ಶ್ರಮ ಕಾರ್ಡ್ ನೋಂದಣಿ ಮಾಡಿರುವ ಸದಸ್ಯರಿಗೆ ಗಣ್ಯರಿಂದ ಕಾರ್ಡ್ ಗಳನ್ನು ವಿತರಿಸಲಾಯಿತು.

ಸಂಘಟನೆಯ ಸದಸ್ಯ ದೀಪಕ್ ಕೋಡಿಯಡ್ಕ ಪ್ರಾರ್ಥಿಸಿದರು, ಉದಯ್ ಕುಮಾರ್ ಸ್ವಾಗತಿಸಿ, ಸಂಘಟನೆ ಕಾರ್ಯದರ್ಶಿ ರಾಜೇಶ್ ಕೆ ಮಯೂರ ವಂದಿಸಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post