ಬೆಂಗಳೂರು: ಬಿಎಂಟಿಸಿ ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ನಗರದ ಓಕಳಿಪುರಂನ ಲೂಲೂ ಮಾರ್ಟ್ ಬಳಿ ನಡೆದಿದೆ.
ಬಿಎಂಟಿಸಿ ಬಸ್ ಡಿಕ್ಕಿಯಾಗಿ ಸವಾರ ವಿಶ್ವ(25) ಸಾವನ್ನಪ್ಪಿದ್ದಾರೆ.
ಬೈಕ್ನಲ್ಲಿ ಹಿಂಬದಿ ಕುಳಿತ ಯುವಕ ಜಗನ್ಗೂ ಕೂಡ ಸಣ್ಣಪುಟ್ಟ ಗಾಯವಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಪೋ-35 ಸೀಗೆಹಳ್ಳಿ ಬಿಎಂಟಿಸಿ ಬಸ್ನ ಹಿಂದಿನ ಚಕ್ರ ಹೀರೋ ಹೊಂಡ ಸ್ಪೆಲಂಡರ್ ಬೈಕ್ ಮೇಲೆ ಹರಿದು ಯುವಕನ ತಲೆ ಮತ್ತು ಎದೆ ಭಾಗ ನಂಜುಗುಜ್ಜಾಗಿದ್ದು, ಸ್ಥಳದಲ್ಲೇ ಸವಾರ ಮೃತಪಟ್ಟಿದ್ದಾರೆ.
ಮೃತದೇಹವನ್ನು ರಾಜ್ ಕುಮಾರ್ ರಸ್ತೆಯಲ್ಲಿರುವ ಸುಗುಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
Post a Comment