ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮತ್ತೆ ಕಿರುತೆರೆಗೆ ಕಾಲಿಟ್ಟ ನಟಿ ಉಮಾಶ್ರೀ

ಮತ್ತೆ ಕಿರುತೆರೆಗೆ ಕಾಲಿಟ್ಟ ನಟಿ ಉಮಾಶ್ರೀ

ನಟಿ ಉಮಾಶ್ರೀಯವರು ಒಬ್ಬ ಅಸಾಧಾರಣ ಪ್ರತಿಭೆ. ನಟಿಯಾಗಿ ಅವರು ಗಳಿಸಿದ ಅಭಿಮಾನಿ ಬಳಗ ಅಪಾರ. ಈಗ ಮತ್ತೆ ನಟಿ ಉಮಾಶ್ರೀಯವರು ಕಿರುತೆರೆಗೆ ಕಾಲಿಟ್ಟಿದ್ದಾರೆ. 

'ಪುಟ್ಟಕ್ಕನ ಮಕ್ಕಳು' ಧಾರವಾಹಿಯಲ್ಲಿ 'ಪುಟ್ಟಕ್ಕ' ನಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಅವರು ಸಜ್ಜಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ನಾಳೆಯಿಂದ ರಾತ್ರಿ 7.30 ಕ್ಕೆ ಈ ಧಾರವಾಹಿ ಪ್ರಸಾರವಾಗಲಿದೆ.

ಗಂಡನಿಂದ ದೂರವಾಗಿ ಮೂರು ಹೆಣ್ಣು ಮಕ್ಕಳ ಬದುಕನ್ನು ಕಟ್ಟಿ ಕೊಡುವ ಬವಣೆಯ ಕಥೆಯಿದು. ಮಂಡ್ಯ ಜಿಲ್ಲೆಯ ದೇವಿಪುರ ಎಂಬಲ್ಲಿ ಈ ಕಥೆ ನಡೆಯುತ್ತದೆ. ' ಜೊತೆಜೊತೆಯಲಿ' ಖ್ಯಾತಿಯ ಆರೂರು ಜಗದೀಶ್ ಅವರೇ ಈ ಧಾರವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

0 تعليقات

إرسال تعليق

Post a Comment (0)

أحدث أقدم