ಬೆಂಗಳೂರು : ಸಚಿವ ಬಿ.ಸಿ.ಪಾಟೀಲ್ ನಿವಾಸಕ್ಕೆ ನಟಿ ರಚಿತಾ ರಾಮ್ ಭೇಟಿ ನೀಡಿದ್ದಾರೆ. ಆ ನಂತರ ಸೌಹಾರ್ದ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ರಚಿತಾ ರಾಮ್ ನಿಮ್ಮನ್ನು ಭೇಟಿ ಮಾಡಿದ್ದು ಖುಷಿಯಾಯಿತು. ನಿಮ್ಮ ಕೃಷಿಯ ಯೋಜನೆಗಳ ಕಾರ್ಯಕ್ರಮಗಳು ಒಳ್ಳೆಯ ಉದ್ದೇಶದಿಂದ ಕೂಡಿದೆ. ರೈತರ ಪರವಾದ ನಿಮ್ಮ ಕಾಳಜಿ ಜನರಿಗೆ ಮನಮುಟ್ಟುತ್ತದೆ. ನಿಮ್ಮ ಸೇವೆಗಳಲ್ಲಿ ನಾವು ಕೈಜೋಡಿಸಬೇಕೆನ್ನುವ ಆಶಯವಿದೆ ಎಂದು ತಿಳಿಸಿದರು.
ಬಿ.ಸಿ. ಪಾಟೀಲ್ ಮಾತನಾಡಿ, ನಿಮ್ಮ ಸಹಕಾರಕ್ಕೆ ನನ್ನ ಧನ್ಯವಾದಗಳು ಎಂದರು. ನಿಮ್ಮ ಪ್ರೋತ್ಸಾಹ ವಿಶ್ವಾಸ ಹೀಗೆ ಇರಲಿ ಕೃಷಿ ಯೋಜನಾ ಕಾರ್ಯಕ್ರಮಗಳಲ್ಲಿ ನೀವು ಭಾಗಿಯಾಗಿ ರೈತರ ಸೇವೆಗಳಿಗೆ ಮುಂದಾಗಿ ಎಂದು ತಿಳಿಸಿದರು.
إرسال تعليق