ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭವಿಷ್ಯದಲ್ಲಿ ಮಹಿಳೆಯರ ಆರೋಗ್ಯದ ಡಿಜಿಟಲೀಕರಣಕ್ಕೆ ARTIST ಹೆಜ್ಜೆ

ಭವಿಷ್ಯದಲ್ಲಿ ಮಹಿಳೆಯರ ಆರೋಗ್ಯದ ಡಿಜಿಟಲೀಕರಣಕ್ಕೆ ARTIST ಹೆಜ್ಜೆ

ಡಾ. ಹೇಮಾ ದಿವಾಕರ್ ನೇತೃತ್ವದ ಬೆಂಗಳೂರಿನ ತರಬೇತಿ ಮತ್ತು ಕೌಶಲ್ಯ ವರ್ಗಾವಣೆ ಸಂಸ್ಥೆ, ಡಿಜಿಟಲ್ ಪ್ಲಾಟ್ಫಾರ್ಮ್ನ ಪ್ರಾಮುಖ್ಯತೆಯನ್ನು ಗುರುತಿಸಿ ಕಾರ್ಯಗತಗೊಳಿಸಲು ಮುಂದಾಗಿದೆ.



ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಜಗತ್ತು ಹೆಚ್ಚು ಡಿಜಿಟಲೀಕರಣದತ್ತ ಸಾಗುತ್ತಿರುವಾಗ, ಬೆಂಗಳೂರು ಮೂಲದ ಆರ್ಟಿಸ್ಟ್ ಫಾರ್ ಹರ್ (ಏಷ್ಯನ್ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್ಫರ್) ಸಂಸ್ಥೆಯ ಸಿಇಒ, ಆರೋಗ್ಯ ಕ್ಷೇತ್ರದ ಮುಂಚೂಣಿ ನಾಯಕಿ ಡಾ. ಹೇಮಾ ದಿವಾಕರ್ ನೇತೃತ್ವದಲ್ಲಿ ಮತ್ತೊಂದು ಕ್ರಾಂತಿಕಾರಕ ಯೋಜನೆ ರೂಪಿಸಲಾಗಿದೆ. ಕರೋನಾ ವೈರಸ್ ಮಾನವೀಯತೆಯನ್ನೇ ಕೊಲ್ಲುವ ಮೊದಲು ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಮತ್ತು ತರಬೇತಿದಾರರಿಗೆ ಕೌಶಲ್ಯ, ಜ್ಞಾನವನ್ನು ಹೆಚ್ಚಿಸಲು ಡಿಜಿಟಲ್ ಮಾರ್ಗವನ್ನು ಸದ್ಭಳಕೆ ಮಾಡಿಕೊಳ್ಳಲು ಮುಂದಾಗಿದೆ.


ಭಾರತದಂತಹ ವಿಶಾಲ ದೇಶದಲ್ಲಿ ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳನ್ನು ಪರಿಗಣಿಸಿ, ಐದು ವರ್ಷಗಳ ಹಿಂದೆಯೇ ಡಾ. ಹೇಮಾ ದಿವಾಕರ್ ಅವರು ದೂರ ಶಿಕ್ಷಣ ಮತ್ತು ತರಬೇತಿ ವಿಧಾನಗಳ ಮೂಲಕ ಅಗತ್ಯ ಕೌಶಲ್ಯ ಮತ್ತು ತರಬೇತಿಯನ್ನು ನೀಡುವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಡಿಜಿಟಲೀಕರಣದ ಪಾತ್ರವನ್ನು  ಯೋಜಿಸಿದ್ದರು. ತಾಯಿ ಮತ್ತು ಮಗುವಿನ ಆರೋಗ್ಯ ಕ್ಷೇತ್ರಗಳಲ್ಲಿ ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ಬಲಪಡಿಸುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ದೇಶದ ದೂರದ ಮತ್ತು ದುರ್ಗಮ ಭಾಗಗಳಲ್ಲಿ ಶಿಶುಗಳ ಮರಣವನ್ನು ತಡೆಗಟ್ಟಲು ಮತ್ತು ಡಿಜಿಟಲ್ ಕೌಶಲ್ಯಗಳು, ಜ್ಞಾನ ವರ್ಗಾವಣೆ ಮತ್ತು ತರಬೇತಿಯ ಮೂಲಕ ಮಹಿಳೆಯರ ಆರೋಗ್ಯವು ರಾಷ್ಟ್ರದ ಸಂಪತ್ತು ಎಂದು ಸಾರಲು ಆರ್ಟಿಸ್ಟ್ ಮುಂದಾಯಿತು, ಇಂದು ಡಿಜಿಟಲೀಕರಣವು ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಆವರಿಸಿದೆ.


"ಸಾಂಕ್ರಾಮಿಕ ರೋಗದಿಂದಾಗಿ ಉಂಟಾಗುವ ಅಡೆತಡೆ ನಿವಾರಿಸಲು ಡಿಜಿಟಲೀಕರಣ ಇಂದು ಅನಿವಾರ್ಯವಾಗಿದೆ. ನಾವು ಇದರಲ್ಲಿ ಈಗಾಗಲೆ ಸಾಕಷ್ಟು ಮುಂದೆ ಸಾಗಿದ್ದರಿಂದ ಹೆಮ್ಮೆಪಡುತ್ತೇವೆ; ಆರ್ಟಿಸ್ಟ್ ಅದ್ಭುತವಾದ, ವಿಶ್ವಾಸಾರ್ಹ ಮತ್ತು ಸಾಬೀತಾಗಿರುವ ಡಿಜಿಟಲ್ ಕೌಶಲ್ಯ ವರ್ಗಾವಣೆ ವೇದಿಕೆಯನ್ನು ನಿರ್ಮಿಸಿದೆ. ಇದು ಆರೋಗ್ಯ ಕಾರ್ಯಕರ್ತರಿಗೆ ಅವರ ಜೊತೆಗಿರುವವರಿಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ” ಎಂದು ಆರ್ಟಿಸ್ಟ್ ಫಾರ್ ಹರ್ ಸಿಇಒ ಡಾ. ಹೇಮಾ ದಿವಾಕರ್ ಹೇಳುತ್ತಾರೆ.


ಡಿಜಿಟಲ್ ಕೌಶಲ್ಯ ವರ್ಗಾವಣೆಯು ಇಂದು ಆರ್ಟಿಸ್ಟ್ ಫಾರ್ ಹರ್ ನ ಮೂಲಾಧಾರಗಳಲ್ಲಿ ಒಂದಾಗಿದೆ. ಇದು ಹಲವಾರು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳು, ತರಬೇತಿ ಮಾಡ್ಯೂಲ್‌ಗಳು, ವಿಚಾರ ಸಂಕಿರಣಗಳು, ಸಮಾಲೋಚನೆಗಳು ಮತ್ತು ವರ್ಚುವಲ್ ಜಗತ್ತಿನಲ್ಲಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ನಡೆಸಿದೆ. ಅವುಗಳಲ್ಲಿ ನಿರ್ಣಾಯಕವಾದ ಮಾನ್ಯತಾ, ತಾಯಿಯ ಆರೈಕೆಯನ್ನು ಒದಗಿಸುವ ಖಾಸಗಿ ಸೌಲಭ್ಯಗಳಿಗಾಗಿ ಫೆಡರೇಶನ್ ಆಫ್ ಅಬ್ಸ್ಟೆಟ್ರಿಕ್ ಮತ್ತು ಗೈನೆಕಾಲಜಿಕಲ್ ಸೊಸೈಟೀಸ್ ಆಫ್ ಇಂಡಿಯಾ (FOGSI) ನೀಡುವ ಗುಣಮಟ್ಟದ ಸುಧಾರಣೆ ಮತ್ತು ಪ್ರಮಾಣೀಕರಣ ಸೇರಿದೆ. ಆರ್ಟಿಸ್ಟ್ ಫಾರ್ ಹರ್ ಪ್ರಾಯೋಗಿಕವಾಗಿ ಕಾರ್ಯಕ್ರಮವನ್ನು ಮಾಡಿ ಡಿಜಿಟಲ್ ಸ್ವರೂಪದ ಮೂಲಕ ಅಗತ್ಯ ತರಬೇತಿಯನ್ನು ನೀಡಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಭಾರತ ಮತ್ತು ಇತರ ಕೆಳ ಮಧ್ಯಮ ಆರೋಗ್ಯ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳಿಗೆ ಮಹಿಳಾ ಆರೋಗ್ಯ ರಕ್ಷಣೆಯ ಮಾರ್ಗದರ್ಶಿ ಸೂತ್ರಗಳನ್ನು ಪುನರ್ ವ್ಯಾಖ್ಯಾನಿಸುವ ORIGYN (ಸ್ತ್ರೀರೋಗ ಶಾಸ್ತ್ರದಲ್ಲಿ ಗುರುತಿಸಲ್ಪಡುವ ಮತ್ತು ಸೃಜನಶೀಲ ಅಧ್ಯಯನದ ಒಯಾಸಿಸ್) ಬೃಹತ್ ವರ್ಚುವಲ್ ಕೌಶಲ್ಯಾಭಿವೃದ್ಧಿ ವೇದಿಕೆ ಹೊಂದಿದೆ. ARTIST ಫಾರ್ ಹರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಗೈನಾಕಾಲಜಿ ಮತ್ತು ಪ್ರಸೂತಿಶಾಸ್ತ್ರದ ಮೂಲಕ ಗರ್ಭಧಾರಣೆ, ಸ್ಥೂಲಕಾಯತೆ ಮತ್ತು ಪೋಷಣೆಯ ಕಾರ್ಯ ಯೋಜನೆಯ (PONI) ಘೋಷಣೆ ಮತ್ತು ಗರ್ಭಾವಸ್ಥೆ ಮತ್ತು ನಾನ್-ಕಮ್ಯುನಿಕಬಲ್ ಡಿಸೀಸ್ ಸಮಿತಿಯ ಕಾರ್ಯಸೂಚಿ ಅನುಷ್ಠಾನಗೊಳಿಸಲು ಡಿಜಿಟಲೀಕರಣದ ಪ್ರಯೋಜನವನ್ನು ಪಡೆದುಕೊಂಡಿದೆ.


ಡಿಜಿಟಲೀಕರಣವು ಕೆಳಮಟ್ಟದ ಆರೋಗ್ಯ ಕ್ಷೇತ್ರಕ್ಕೂ ಸಹಾಯ ಮಾಡಿದೆ. ಆರ್ಟಿಸ್ಟ್ ನ ಪ್ರಾಯೋಗಿಕ ಯೋಜನೆ- ಕರ್ನಾಟಕದ ನಂಜನಗೂಡು ಕ್ಷೇತ್ರದ “ಹೆಮ್ಮರಗಾಲ ಮಾದರಿ ಆರೋಗ್ಯ ಮತ್ತು ಯೋಗ ಕ್ಷೇಮ ಗ್ರಾಮ” ಒಂದು ಪಿಪಿಪಿ ಮಾದರಿಯಾಗಿದೆ, ಇದು ಹೊಸ ಗ್ರಾಮೀಣ ಕಡಿಮೆ-ಡೋಸ್ ಹೈ-ಇಂಪ್ಯಾಕ್ಟ್ ರೀತಿಯ ಮುನ್ನೆಚ್ಚರಿಕೆಯ ಆರೋಗ್ಯ ವಿತರಣಾ ವ್ಯವಸ್ಥೆಗೆ ದಾರಿಯಾಗಿದೆ, ಇದನ್ನು ರಾಜ್ಯಾದ್ಯಂತ ಜಾರಿಗೆ ತರಬಹುದು.  “ಈ ಯೋಜನೆಯ ನಿರಂತರತೆಯು ಮುಂದಿನ ಕೆಲವು ತಿಂಗಳುಗಳಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಒದಗಿಸುವವರಿಗೆ ಆತ್ಮವಿಶ್ವಾಸ ಮತ್ತು ಕೌಶಲ್ಯ ವರ್ಗಾವಣೆಯ ಮೂಲಕ ಮುಂಜಾಗ್ರತಾ ಆರೋಗ್ಯ ಸೇವೆಯನ್ನು ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಸಮಸ್ಯೆಗಳನ್ನು ಮೊದಲೇ ಗುರುತಿಸಲು ಮತ್ತು ಉಲ್ಲೇಖಿಸಲು ತಮ್ಮ ವಿವೇಚನೆಯನ್ನು ಬಳಸಲು ಇದು ಅವರಿಗೆ ಸಹಾಯ ಮಾಡುತ್ತದೆ” ಎಂದು ಡಾ. ಹೇಮಾ ತಿಳಿಸಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಜನನಿ ಹೆಲ್ಪ್‌ಲೈನ್ ಮತ್ತೊಂದು ನವೀನ ಉಪಕ್ರಮವಾಗಿದ್ದು ಭಾರತದಲ್ಲಿ  ಮಹಿಳೆಯರು ತಜ್ಞರೊಂದಿಗೆ ಸಮಾಲೋಚನೆ ನಡೆಸಲು ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಮುಂಚೂಣಿಯಲ್ಲಿರುವ 1000 ಆರೋಗ್ಯ ಸೇವೆ ಒದಗಿಸುವವರ ಮೂಲಕ, ನಂಜನಗೂಡು ಕ್ಷೇತ್ರದಲ್ಲಿ ಫಲಾನುಭವಿಗಳ ಸಂಖ್ಯೆ ಸುಮಾರು ಒಂದು ಲಕ್ಷ ಮಹಿಳೆಯರಾಗಲಿದ್ದಾರೆ. FIGO ವೆಲ್ ವುಮೆನ್ ಹೆಲ್ತ್ ಕೇರ್ ಕಮಿಟಿಯಿಂದ ದತ್ತಾಂಶ ದಾಖಲಾತಿ ಮತ್ತು ಉಪಕ್ರಮದ ಪರಿಣಾಮವಾಗಿ ಪೌಷ್ಟಿಕಾಂಶ, ರಕ್ತಹೀನತೆ, ಮಧುಮೇಹದ ಸ್ಥಿತಿ ಮತ್ತು  ಗರ್ಭನಿರೋಧಕದ ವರ್ಧಿತ ಬಳಕೆಯಲ್ಲಿನ ಸುಧಾರಣೆ ಕಂಡುಬಂದಿದ್ದು, ಅವೆಲ್ಲ ದಾಖಲಾಗಿದೆ. ಡಾ. ಹೇಮಾ ದಿವಾಕರ್ ಈ ಪ್ರತಿಷ್ಠಿತ ಸಮಿತಿಯ ಅಧ್ಯಕ್ಷ ರಾಗಿದ್ದಾರೆ.


"ಹೆಮ್ಮರಗಾಲ ಮಾದರಿಯು ಡಿಜಿಟಲ್ ಮೂಲಕ ನೀಡಲಾಗುತ್ತಿರುವ ಆರೋಗ್ಯ ರಕ್ಷಣೆಯ ಭವಿಷ್ಯವಾಗಿದೆ. ಅಲ್ಲಿ ಜನಪ್ರತಿನಿಧಿಗಳು ಆರೋಗ್ಯ ತಜ್ಞರನ್ನು ಹಳ್ಳಿಗರ ಮನೆ ಬಾಗಿಲಿಗೆ ಕೊಂಡೊಯ್ಯುತ್ತಾರೆ, ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುತ್ತಾರೆ" ಎಂದು ಡಾ. ಹೇಮಾ ಹೇಳಿದರು.


ಡಿಜಿಟಲೀಕರಣವು ಈಗ ವ್ಯಾಪಕವಾಗಿದ್ದರೂ, ARTIST ಫಾರ್ ಹರ್ ಸಂಪೂರ್ಣ ಆರೋಗ್ಯ ಪರಿಸರ ವ್ಯವಸ್ಥೆಗೆ ಪ್ರಯೋಜನವಾಗುವಂತೆ ವರ್ಚುವಲ್ ಮಾರ್ಗವನ್ನು ತೆಗೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಇತ್ತೀಚೆಗಷ್ಟೇ  ARTIST ಫಾರ್ ಹರ್ ಸಾಮರ್ಥ್ಯ ನಿರ್ಮಾಣದಲ್ಲಿ ಶ್ರೇಷ್ಠತೆಗಾಗಿ FICCI ಪ್ರಶಸ್ತಿಯನ್ನು ಪಡೆದಿದೆ.


ಆರ್ಟಿಸ್ಟ್ ಫಾರ್ ಹರ್:

ಏಷ್ಯನ್ ರಿಸರ್ಚ್ & ಟ್ರೇನಿಂಗ್ ಇನ್ಸ್ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್ಫರ್ (ARTIST), ಕಲಿಕೆಯ ಪ್ರಮುಖ ಸಂಸ್ಥೆಯಾಗಿದ್ದು, ಬೆಂಗಳೂರು ಹೊರಗೆ ಕೆಲಸ ಮಾಡುತ್ತಿದೆ ಮತ್ತು ಭಾರತದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರ (ObGyns) ಸಾಮರ್ಥ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಭಾರತದಾದ್ಯಂತ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರ ಜ್ಞಾನ, ವರ್ತನೆ ಮತ್ತು ಅಭ್ಯಾಸಗಳನ್ನು (KAPs) ವ್ಯಾಪಕವಾಗಿ ಸಮೀಕ್ಷೆ ಮಾಡಿದ ನಂತರ, ARTIST ತಜ್ಞರು ಆಶ್ಚರ್ಯಕರ ಸಂಗತಿಗಳನ್ನು ಸಂಗ್ರಹಿಸಲು ಮತ್ತು KAP ಗಳಲ್ಲಿ GAP ಗಳನ್ನು ಗುರುತಿಸಲು ಸಮರ್ಥರಾಗಿದ್ದಾರೆ. ಈ ಅಂತರವನ್ನು ತುಂಬಲು ARTIST ತರಬೇತಿ, ಬೋಧನೆ ಮತ್ತು ಸಂಶೋಧನೆ ನಡೆಸುತ್ತದೆ. ಪರಿಣಿತ ಆರೋಗ್ಯ ವೃತ್ತಿಪರರ ಗುಂಪು, ವೃತ್ತಿಪರ ಸಂಸ್ಥೆಗಳ ನಾಯಕರು (ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ) ಪ್ರಮುಖ ಅಭಿಪ್ರಾಯ ತರೂಪಿಸುವವರು, ಸಂಶೋಧಕರು, ಶಿಕ್ಷಣತಜ್ಞರು ಮತ್ತು ಅಧ್ಯಯನದಲ್ಲಿ ಪ್ರಮುಖ ವೈದ್ಯರ ತಂಡವನ್ನು ARTIST ಒಳಗೊಂಡಿದೆ. http://www.hemadivakar.com/what-is-artist/ 


ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ:

ಡಾ.ಹೇಮಾ ದಿವಾಕರ್

ಸಲಹೆಗಾರರು, ObGyn ಮತ್ತು ವೈದ್ಯಕೀಯ ನಿರ್ದೇಶಕರು, ದಿವಾಕರ್ಸ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು.

ಅಧ್ಯಕ್ಷರು, FOGSI 2013, ಆರ್ಗನೈಸಿಂಗ್ ಚೇರಮನ್ AICOG 2019,

CEO – ARTIST FOR HER (ಕೌಶಲ್ಯ ವರ್ಗಾವಣೆಗಾಗಿ ಏಷ್ಯನ್ ಸಂಶೋಧನೆ ಮತ್ತು ತರಬೇತಿ ಸಂಸ್ಥೆ),

FOGSI Ambassador of FIGIO (ಅಂತರರಾಷ್ಟ್ರೀಯಸ್ತ್ರೀರೋಗತಜ್ಞರು ಮತ್ತು ಪ್ರಸೂತಿ ತಜ್ಞರ ಒಕ್ಕೂಟ). 

ಮೊಬೈಲ್:  9844046724 | ಇಮೇಲ್: drhemadivakar@gmail.com

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم