ದಾವಣಗೆರೆ: ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಟ್ರಾನ್ಸ್‌ಫಾರ್ಮರ್ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾ ಘಟನೆಯೊಂದು ದಾವಣಗೆರೆ ನಗರದ ಎಲೆಬೇತೂರು ಬಳಿ ಬುಧವಾರ ಸಂಭವಿಸಿದೆ.
ಬಸ್ನಲ್ಲಿದ್ದ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾವಣಗೆರೆಯಿಂದ ಎಲೆಬೇತೂರು ಮಾರ್ಗವಾಗಿ ಜಗಳೂರು ಕಡೆಗೆ ವಿನಾಯಕ ಹೆಸರಿನ ಖಾಸಗಿ ಬಸ್ ತೆರಳುತ್ತಿತ್ತು.
ಈ ಬಸ್ನಲ್ಲಿ 25 ಮಂದಿ ಪ್ರಯಾಣಿಸುತ್ತಿದ್ದರು. ಎಲೆಬೇತೂರು ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್, ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಅಪಘಾತ ಸಂಭವಿಸಿದ ವೇಳೆ ವಿದ್ಯುತ್ ಪೂರೈಕೆ ಇರಲಿಲ್ಲ. ಭಾರೀ ದುರಂತವೊಂದು ತಪ್ಪಿದ್ದು, ಬಸ್ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق