ಜನವರಿಯಲ್ಲಿ ನಡೆಯಲಿರುವ ಉಡುಪಿ ಪರ್ಯಾಯ ಮಹೋತ್ಸವ ಸೇರಿ ಮುಂದೆ ನಡೆಯುವ ಎಲ್ಲಾ ರಥೋತ್ಸವ, ಜಾತ್ರೆಗಳಿಗೆ ಸಂಪೂರ್ಣವಾಗಿ ನಿಷೇಧ ಹೇರಬೇಕೆಂದು ತಜ್ಞರ ಸಮಿತಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದೆ.
ಈಗಾಗಲೇ ಮದುವೆ ಸಮಾರಂಭಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ರಾಜಕೀಯ ಸಭೆ, ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆ, ಹಬ್ಬಗಳಲ್ಲಿ ಕೋವಿಡ್ ನಿಯಮವನ್ನು ಪಾಲಿಸುತ್ತಿಲ್ಲ. ಇದರಿಂದ ಮತ್ತೆ ಕೊರೋನಾಕ್ಕೆ ನಾವೇ ಆಮಂತ್ರಿಸಿದಂತಾಗುವುದು. ಮದುವೆ ಮುಂತಾದ ಸಮಾರಂಭಕ್ಕೆ ಈಗ ಇರುವ ಸಂಖ್ಯಾಮಿತಿಯನ್ನು ಕೂಡ ಇನ್ನಷ್ಟು ಕಡಿಮೆ ಮಾಡಬೇಕೆಂದು ತಜ್ಞರ ಸಮಿತಿ ಹೇಳಿದೆ. ಈ ನಿಟ್ಟಿನಲ್ಲಿ ಬರುವ ಹೊಸವರ್ಷಕ್ಕೆ ಯಾವೆಲ್ಲ ರೀತಿಯ ನಿಯಮಗಳನ್ನು ಜಾರಿಗೊಳಿಸಬೇಕೆಂಬುದನ್ನು ಜಿಲ್ಲಾಡಳಿತ ಚರ್ಚಿಸಿ ನಿರ್ಧರಿಸಬೇಕಿದೆ.
إرسال تعليق