ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 2 ವರ್ಷದ ಮಗು ಬಿಸಿ ನೀರಿಗೆ ಬಿದ್ದು ಮೃತ್ಯು

2 ವರ್ಷದ ಮಗು ಬಿಸಿ ನೀರಿಗೆ ಬಿದ್ದು ಮೃತ್ಯು

 


ಮೈಸೂರು: ಬಿಸಿ ನೀರಿಗೆ ಬಿದ್ದು ಪುಟ್ಟ ಮಗುವೊಂದು ಮೃತಪಟ್ಟ ಘಟನೆಯೊಂದು ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ರಾಮು-ಜಯಲಕ್ಷ್ಮೀ ದಂಪತಿಯ ಪುತ್ರಿ ಆದ್ಯಾ(2) ಮೃತಪಟ್ಟಿರುವ ಮಗು.


ತಾಯಿ ಹೊರಗೆ ಹೋದ ಮೇಲೆ ಮಗು ಬಿಸಿ ನೀರಿನಲ್ಲಿ ಬಿದ್ದಿದೆ. ಮಗುವಿನ ಚೀರಾಟ ಕೇಳಿ ಓಡಿ ಬಂದು ನೋಡಿದಾಗ ಬಿಸಿ ನೀರಿಗೆ ಬಿದ್ದಿರುವುದು ಗೊತ್ತಾಗಿದೆ.

ತಕ್ಷಣ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೆ.ಆರ್.ಆಸ್ಪತ್ರೆಯಲ್ಲಿ ಮಗು ಕೊನೆಯುಸಿರೆಳೆದಿದೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

0 تعليقات

إرسال تعليق

Post a Comment (0)

أحدث أقدم