ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆದಂಬಾಡಿ: ಬಸ್ ತಂಗುದಾಣಕ್ಕೆ ಹೊಸ ಮೆರುಗು ನೀಡಿದ ಶ್ರೀ ವಿಷ್ಣು ಯುವ ಶಕ್ತಿ ಬಳಗ

ಕೆದಂಬಾಡಿ: ಬಸ್ ತಂಗುದಾಣಕ್ಕೆ ಹೊಸ ಮೆರುಗು ನೀಡಿದ ಶ್ರೀ ವಿಷ್ಣು ಯುವ ಶಕ್ತಿ ಬಳಗ

 



ಪುತ್ತೂರು: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ಅಜಾದಿ ಕಾ‌ ಅಮೃತ ಮಹೋತ್ಸವ ಸ್ವಚ್ಚತಾ ಕಾರ್ಯಕ್ರಮ ದಡಿಯಲ್ಲಿ  ಶ್ರೀ ವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ ವತಿಯಿಂದ ಕೆದಂಬಾಡಿ ವ್ಯಾಪ್ತಿಯ ಹಳೆಯ ತ್ಯಾಗರಾಜನಗರ ಬಸ್ ತಂಗುದಾಣಕ್ಕೆ ಹೊಸ ಚೈತನ್ಯ ರೂಪದ‌ ವರ್ಣಚಿತ್ತಾರದ ಫೈಟಿಂಗ್ ಮೂಲಕ ಸಜ್ಜುಗೊಂಡ ಬಸ್ ತಂಗುದಾಣದ ಕಾರ್ಯಕ್ರಮ ಆಕ್ಟೋಬರ್ 31 ರಂದು ನಡೆಯಿತು.


ಶ್ರೀ ವಿಷ್ಣು ಯುವಶಕ್ತಿ ಬಳಗ (ರಿ) ಮಜ್ಜಾರಡ್ಕ ಈ ಸಂಘಟನೆಯ ಸಕ್ರಿಯ ಚಟುವಟಿಯಿಂದ ಪ್ಲಾಸ್ಟಿಕ್ ಮುಕ್ತ ಅರಿಯಡ್ಕ ಗ್ರಾಮ ಅಭಿಯಾನದಡಿಯಲ್ಲಿ ಬಸ್ ತಂಗುದಾಣದಲ್ಲಿ ಸ್ವಚಭಾರತ ಅಭಿಯಾನದ ಸಂದೇಶ ನೀಡುವ ಬಿತ್ತಿಚಿತ್ರಗಳನ್ನು ಬಿಡಿಸುವುದರ ಜೊತೆಗೆ ಸಮಾಜದ ಜನತೆಗೆ ಮಾದರಿಯಾಗಿದ್ದಾರೆ.ಈ ಒಂದು ಸಂಘಟನೆ ತನ್ನ ದುಡಿಮೆಯಲ್ಲಿ ಸಮಾಜಕ್ಕೆ ಒಂದಿಷ್ಟು ಒಳಿತು ಮಾಡುವ ಕಾರ್ಯಕ್ರಮದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಳ್ಳುವ ಉತ್ತಮ ಸಂಘಟನೆಯಾಗಿ ಬೆಳೆಯುತ್ತಿದೆ‌.


ಉತ್ತಮ ಸಂದೇಶ ನೀಡುವ ವರ್ಣ ಚಿತ್ರಗಳನ್ನು ರಚಿಸುವ ಕಾರ್ಯದಲ್ಲಿ ಸ್ಥಳಿಯ ಚಿತ್ರಕಲಾವಿದ ಪ್ರೊ.‌ ಪ್ರದೀಪ್ ಪಾಟಾಳಿ ಬಿ.ಎಸ್ಸಿ ಎನಿಮೇಶನ್ ಶಾರದಾ ಡಿಗ್ರಿ ಕಾಲೇಜು ತಲಪಾಡಿ ಮಂಗಳೂರು ಮತ್ತು ಶ್ರೀ ವಿಷ್ಣು ಯುವ ಶಕ್ತಿ ಬಳಗ (ರಿ) ಮಜ್ಜಾರಡ್ಕ ಇದರ ಸಂಘಟನಾ ಕಾರ್ಯದರ್ಶಿ ಹಾಗೂ ಚಿತ್ರಕಲಾವಿದ ರಾಜೇಶ್ ಮಯೂರ ಇವರ ಸಹಕಾರದಿಂದ ಬಸ್ ತಂಗುದಾಣ ಪೈಂಟಿಂಗ್ ಕಾರ್ಯ ಬಹಳ ಅಚ್ಚುಕಟ್ಟಾಗಿ ನಡೆಯಿತು.

ಸಮಾರೋಪ ಸಮಾರಂಭ:

ಆಕ್ಟೋಬರ್ 1 ರಿಂದ ಆರಂಭವಾದ ಕ್ಲೀನ್ ಇಂಡಿಯಾ ಕಾರ್ಯಕ್ರಮದಲ್ಲಿ ಈ ಸಂಘಟನೆ ತಿಂಗಳಾಡಿ ಶಾಲೆಗೆ ಸ್ಯಾನಿಟೈಸರ್ ಬಳಸಿ ಸ್ವಚ್ಚತೆ, ಅರಿಯಡ್ಕ ಗ್ರಾಮ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ, ಮನೆ ಮನೆ ಭೇಟಿ ನೀಡಿ ಪ್ಲಾಸ್ಟಿಕ್ ಸಂಗ್ರಹ, ಹಾಗೂ ಉತ್ತಮ ಸಂದೇಶ ಸಾರುವ ಬಸ್ ತಂಗುದಾಣಕ್ಕೆ ವರ್ಣಚಿತ್ರದ ಮೂಲಕ ಜಾಗೃತಿ ಮೂಡಿಸುವ ಇನ್ನು ಹಲವಾರು ರೀತಿಯ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ನಡೆಸುವುದರ ಜೊತೆಗೆ ಸಂಘಟನೆಯು ಬಹಳ ಪ್ರಶಂಸೆಗೆ‌ಪಾತ್ರರಾಗಿದೆ.


ಈ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಷ್ ರೈಯವರು ಮಾತಾನಾಡಿ ಯುವ ಜನತೆ ಯಾವರೀತಿಯಾಗಿ ಮಾದರಿಯಾಗಬೇಕು ಎಂಬುದರ ಬಗ್ಗೆ ವಿವರಿಸಿದರ ಜೊತೆಗೆ ಪ್ರಶಸ್ತಿಗಳನ್ನು ನಾವು ಹಿಂಬಾಲಿಸುವಂತಾಗಬಾರದು ಪ್ರಶಸ್ತಿಗಳೇ ನಮ್ಮನ್ನು ಹುಡುಕಿಕೊಂಡು ಬರುವಂತಾಗಬೇಕು ಎಂದು ಪ್ರೇರಣೆಯನ್ನು ನೀಡಿದರು. ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತನ್ ರೈ ಕುಂಬ್ರ ಮಾತಾನಾಡಿ ನಮ್ಮ  ಪಂಚಾಯತ್ ವ್ಯಾಪ್ತಿಯಲ್ಲಿ ಸಕ್ರಿಯವಾಗಿ ಕೆಲಸ‌ಮಾಡುವುದರ ಜೊತೆಗೆ ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಿರುವ ನಿಟ್ಟಿನಲ್ಲಿ ಪಂಚಾಯತ್ ಪರವಾಗಿ ಸಂಘಟನೆಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ನೆಹರು ಯುವ ಕೇಂದ್ರ ಮಂಗಳೂರು ತಾಲೂಕು ಸಂಯೋಜಕಿ ಪ್ರಜ್ಞಾ ಕುಲಾಲ್ ಕಾವು ಸಂಘಟನೆಯ ಸಕ್ರಿಯ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಶುಭಹಾರೈಸಿದರು. ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಪತ್ರಕರ್ತ ಸಿಶೇ ಕಜೆಮಾರ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.


ಜಾಗೃತಿ ಜಾಥಾ 

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರವನ್ನು ಸ್ವಚ್ಛವಾಗಿಡುವುದು ಉದ್ದೇಶದಿಂದಾಗಿ  ಜನತೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉತ್ತಮ ಧ್ಯೇಯದೊಂದಿಗೆ ಸಂಘಟನೆಯ ಸದಸ್ಯರುಗಳಿಂದ ಜಾಥ ನಡೆಯಿತು. ವಿವಿಧ ಘೋಷಣಾ ಪತ್ರಗಳನ್ನು ಹಿಡಿದುಕೊಂಡು ಘೋಷಣೆ ಕೂಗುತ್ತಾ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.


ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾಪಂ ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್, ಜಯಲಕ್ಷ್ಮೀ ಬಲ್ಲಾಳ್, ಅರಿಯಡ್ಕ ಗ್ರಾಪಂ ಸದಸ್ಯ ರಾಜೇಶ್ ಮಣಿಯಾಣಿ, ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷ ರವಿ ಮಜ್ಜಾರ್ ,ಸಂಘಟನಾ ಕಾರ್ಯದರ್ಶಿಯಾದ ರಾಜೇಶ್ ಮಯೂರ ಸಂಘಟನೆಯ ಪಧಾದಿಕಾರಿಗಳು ಮತ್ತು ಸರ್ವಸದಸ್ಯರು ಭಾಗಿಯಾಗಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم