ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಹಕಾರ ಸಂಘಗಳ ಮಹಾಸಭೆಗೆ ಚುನಾವಣೆ ನೀತಿ ಸಂಹಿತೆ ವಿನಾಯಿತಿ ಕೋರಿ ಮನವಿ

ಸಹಕಾರ ಸಂಘಗಳ ಮಹಾಸಭೆಗೆ ಚುನಾವಣೆ ನೀತಿ ಸಂಹಿತೆ ವಿನಾಯಿತಿ ಕೋರಿ ಮನವಿ



ಬಂಟ್ವಾಳ: ಈಗಾಗಲೇ ನಿಗದಿಯಾಗಿರುವ ಸಹಕಾರ ಸಂಘಗಳ ಮಹಾಸಭೆಗಳಿಗೆ ಚುನಾವಣಾ ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡುವಂತೆ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತದ ಅಧ್ಯಕ್ಷರಾದ ಪ್ರಭಾಕರ ಪ್ರಭು ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.


20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ಸಂಬಂಧ ಭಾರತ ಚುನಾವಣಾ ಆಯೋಗದ ಪ್ರಕಟಣೆ ತಮ್ಮ ಕಚೇರಿಯಿಂದ ದಿನಾಂಕ 09-11-2021 ರಂದು ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಮೇರೆಗೆ ಅಂದಿನಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಇದರಿಂದಾಗಿ ಭಾರತ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯ ಮಾರ್ಗಸೂಚಿಗಳ ಅನ್ವಯ ಚುನಾವಣೆ ನಡೆಯುವ 31 ಜಿಲ್ಲೆಗಳಲ್ಲಿ ಸರಕಾರಿ ಕಾರ್ಯಕ್ರಮ ಸೇರಿದಂತೆ ಯಾವುದೇ ಸಭೆ, ಸಮಾರಂಭಗಳು ನಡೆಯುವಂತಿಲ್ಲ.


ಆದರೆ ತಮ್ಮ ಪ್ರಕಟಣೆ ಹೊರಡುವ ಮೊದಲೇ ರಾಜ್ಯದ ಎಲ್ಲಾ ಸಹಕಾರ ಸಂಘಗಳು ತಮ್ಮ ವಾರ್ಷಿಕ ಮಹಾಸಭೆಯ ದಿನಾಂಕವನ್ನು ನಿಗದಿಪಡಿಸಿಕೊಂಡು ಈಗಾಗಲೇ ಆಮಂತ್ರಣ ಪತ್ರ ಮುದ್ರಿಸಿ ಸಂಘದ ಸದಸ್ಯರಿಗೆ ರವಾನೆ ಮಾಡಲಾಗಿದೆ. ಸಹಕಾರ ಸಂಘಗಳ ನಿಯಮದಂತೆ ಸೆಪ್ಟೆಂಬರ್ 25ರ ಒಳಗೆ ವಾರ್ಷಿಕ ಮಹಾಸಭೆ ನಡೆಸಿ ಮುಗಿಸಬೇಕು. ಕೋವಿಡ್ -19ರ ಮಾರ್ಗಸೂಚಿ ವಿನಾಯಿತಿ ಮೇರೆಗೆ ರಾಜ್ಯದ ಎಲ್ಲಾ ಸಹಕಾರ ಸಂಘಗಳ ವಾರ್ಷಿಕ ಮಹಾಸಭೆಗಳನ್ನು ಡಿಸೆಂಬರ್ ಒಳಗೆ ಮುಗಿಸುವಂತೆ ಸಹಕಾರ ಸಂಘದ ನಿಬಂಧಕರು ಆದೇಶ ಹೊರಡಿಸಿದ್ದಾರೆ.


ಈ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಸಹಕಾರ ಸಂಘಗಳು ಮಹಾಸಭೆ ದಿನ ಗೊತ್ತುಪಡಿಸಿ, ತಯಾರಿ ನಡೆಸಿ ಆಮಂತ್ರಣ ರವಾನೆ ಮಾಡಿದ್ದರಿಂದ ಸಹಕಾರ ಸಂಘಗಳಿಗೆ ಅನಾವಶ್ಯಕ ವೆಚ್ಚವಾಗಲಿದೆ. ಆದುದರಿಂದ ಈಗಾಗಲೇ ನಿಗದಿಯಾಗಿರುವ ಸಹಕಾರ ಸಂಘಗಳ ಮಹಾಸಭೆಗಳಿಗೆ ಚುನಾವಣಾ ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡುವಂತೆ ಅವರು ಕೋರಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم