ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕ್ಯಾಟರಿಂಗ್ ಸಂಸ್ಥೆ ಯೊಂದರ ವಾಹನ ಅಪಘಾತ; ಇಬ್ಬರು ಸಾವು, ಇಬ್ಬರಿಗೆ ಗಾಯ

ಕ್ಯಾಟರಿಂಗ್ ಸಂಸ್ಥೆ ಯೊಂದರ ವಾಹನ ಅಪಘಾತ; ಇಬ್ಬರು ಸಾವು, ಇಬ್ಬರಿಗೆ ಗಾಯ

 


ಮಂಗಳೂರು: ಮಂಗಳೂರು - ಬಿ ಸಿ ರೋಡ್ ಮಧ್ಯೆ ಸಮೀಪದ ರಾಮಲ್ ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ವಾಹನ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ಉಪ್ಪಿನಂಗಡಿ ಮೂಲದ ಚೇತನ್ ಮತ್ತು ಅಶಿತ್ ಮೃತಪಟ್ಟವರು. ಬಂಟ್ವಾಳ ಮೂಲದ ಸಿಂಚನ್ ಮತ್ತು ಸುದೀಪ್ ಗಾಯಗೊಂಡಿದ್ದಾರೆ.

ಬಿ ಸಿ ರೋಡ್ ಕೈಕಂಬ ಸಮೀಪದ ಮೋಡಂಕಾಪು ಎಂಬಲ್ಲಿನ ಕ್ಯಾಟರಿಂಗ್ ಸಂಸ್ಥೆಯೊಂದರ ವಾಹನ ಇದಾಗಿದ್ದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹಾರ ಪೂರೈಸಿ ಮರಳುತ್ತಿದ್ದ ವೇಳೆಯಲ್ಲಿ ಪಿಕಪ್ ನ ವೀಲ್ ಎಂಡ್ ತುಂಡಾದ ಪರಿಣಾಮ ಅಪಘಾತ ಸಂಭವಿಸಿದೆ.


ವಾಹನ ರಾಮಲ್ ಕಟ್ಟೆ ತಲುಪಿದ್ದಂತೆ ರಸ್ತೆ ಮಧ್ಯೆ ವಾಹನ 2ಸುತ್ತು ತಿರುಗಿದ್ದು ಬಳಿಕ ಮರಕ್ಕೆ ಡಿಕ್ಕಿ ಹೊಡೆದಿದೆ ವಾಹನ ತಿರುಗಿಸಿದ ರಭಸಕ್ಕೆ ಹಿಂಬದಿಯಲ್ಲಿದ್ದ ನಾಲ್ವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಇದರ ಜೊತೆಗೆ ಒಬ್ಬ ರಸ್ತೆ ಪಕ್ಕದ ಡ್ಯಾಮ್ ನ ಕಂಪೌಂಡ್ ಗೋಡೆ ದಾಟಿ ನೀರಿಗೆ ಬಿದ್ದಿದ್ದ ಎಂದು ದಾರಿಹೋಕರು ತಿಳಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم