ಉಡುಪಿ: ಉಡುಪಿ ನಗರ ವ್ಯಾಪ್ತಿಯಲ್ಲಿ ವಿವಿಧ ವ್ಯಕ್ತಿ, ಉದ್ದಿಮೆ, ಸಂಸ್ಥೆ ಹಾಗೂ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಜಾಹೀರಾತು ಬೋರ್ಡ್, ಭಿತ್ತಿಪತ್ರ ಹಾಗೂ ಬ್ಯಾನರ್ಗಳನ್ನು ನಗರಸಭೆಯ ಅನುಮತಿ ಪಡೆಯದೇ ಹಾಕಿರುವುದು ಕಂಡು ಬಂದಿದ್ದು, ಈಗಾಗಲೇ ಅನಧಿಕೃತವಾಗಿ ಪ್ರಚುರಪಡಿಸಿರುವ ಭಿತ್ತಿಪತ್ರ, ಬ್ಯಾನರ್, ಬಂಟಿಂಗ್ಸ್ ಹಾಗೂ ಇತರೆ ಪ್ರಚಾರ ಸಾಮಾಗ್ರಿಗಳನ್ನು ನಗರಸಭೆಯ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವುದನ್ನು ಸಂಬಂದಿಸಿದವರೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಯಾವುದೇ ಮುನ್ಸೂಚನೆ ನೀಡದೇ ನಗರಸಭೆಯಿಂದ ತೆರವುಗೊಳಿಸಿ, ತಗಲುವ ವೆಚ್ಚವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಲಾಗುತ್ತದೆ.
ಜಾಹೀರಾತು ಪ್ರಚುರಪಡಿಸಲು ಉದ್ದೇಶಿಸಿದವರು ಕಡ್ಡಾಯವಾಗಿ ನಗರಸಭೆಯಿಂದ ಪರವಾನಿಗೆ ಪಡೆದುಕೊಂಡು ಪರವಾನಿಗೆ ನಂಬರನ್ನು ದಾಖಲಿಸಿ ತಮ್ಮ ಸಂಸ್ಥೆಗಳ ಜಾಹೀರಾತು ಫಲಕ, ಫ್ಲೆಕ್ಸ್, ಬೋರ್ಡ್ ಹಾಗೂ ಇತರೆ ಜಾಹೀರಾತು ಸಂಬಂಧಿಸಿದ ಸಾಮಾಗ್ರಿಗಳನ್ನು ಪ್ರಚುರಪಡಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق