ಬೆಂಗಳೂರು ; ಮಳೆಯಿಂದ ಟೊಮೆಟೊ ಬೆಳೆ ಹಾನಿಗೀಡಾಗಿದ್ದು, ಇದರಿಂದಾಗಿ ಮಾರುಕಟ್ಟೆಗೆ ಟೊಮೆಟೊ ಹೆಚ್ಚು ಬರುತ್ತಿಲ್ಲ. ಈಗ ಶುಭ ಸಮಾರಂಭಗಳ ಸಮಯ ಆಗಿರುವುದರಿಂದ ಟೊಮೆಟೊಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಬೆಲೆ ಏರಿಕೆ ಕಂಡು ಬರುತ್ತಿದೆ.
ವಾರದ ಹಿಂದೆ ಕೆಜಿ ಟೊಮೆಟೊ ಬೆಲೆ ₹80 ನಷ್ಟು ಹೆಚ್ಚಿತ್ತು. ಮಳೆಯ ಕಾರಣದಿಂದಾಗಿ ಮಾರುಕಟ್ಟೆಗೆ ಟೊಮೆಟೊ ಅಭಾವ ಗಣನೀಯವಾಗಿ ಇಳಿದಿದ್ದು, ಟೊಮೆಟೊ ದರ ₹100ರ ಹತ್ತಿರ ತಲುಪಿದೆ. ಕಳೆದ ವಾರ ₹60 ಇತ್ತು. ನಗರದ ಮಾತ್ರವಲ್ಲದೇ ಜಿಲ್ಲೆಯ ಇತರ ಕಡೆಗಳಲ್ಲೂ ಇದೇ ಬೆಲೆ ಇದೆ.
إرسال تعليق