ಮೈಸೂರು: ಚಾಮುಂಡಿ ಬೆಟ್ಟ ರಸ್ತೆಯಲ್ಲಿ ಮೂರು ಚಿರತೆಗಳು ಪ್ರತ್ಯಕ್ಷವಾಗಿದ್ದು, ಚಿರತೆಗಳನ್ನು ಕಂಡು ಕಾರು ಚಾಲಕ ಬೆಚ್ಚಿ ಬಿದ್ದಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಯಿಂದ ಲಲಿತಾದ್ರಿಪುರದ ತಿರುವಿನ ಸರ್ಕಲ್ ಬಳಿ ಮೂರು ಚಿರತೆಗಳು ರಸ್ತೆ ಮಧ್ಯೆದಲ್ಲಿ ಸಂಚಾರ ಮಾಡಿದೆ. ಸಂಜೆಯಾಗುತ್ತಿದ್ದಂತೆ ಚಿರತೆಗಳು ಚಾಮುಂಡಿಬೆಟ್ಟದ ತಪ್ಪಲಿನ ರಸ್ತೆಗೆ ಬರುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಿ ಎಂಬಂತಾಗಿದೆ.
ಆದರೆ, ಈವರೆಗೂ ಮನುಷ್ಯರ ಮೇಲೆ ಚಿರತೆಗಳು ದಾಳಿ ಮಾಡಿಲ್ಲ ಎಂಬ ವಿಚಾರ ಸಮಾಧಾನ ತಂದಿದೆ. 3 ದಿನಗಳ ಹಿಂದೆ ಬೈಕ್ ಸವಾರ ಬೆಟ್ಟಕ್ಕೆ ಹೋಗುವ ಸಂದರ್ಭದಲ್ಲಿ ಬೈಕ್ ಮುಂದೆಯೇ ಚಿರತೆ ಪ್ರತ್ಯಕ್ಷವಾಗಿತ್ತು.
ಇದೀಗ ಕಾರು ಎದುರು ಮೂರು ಚಿರತೆಗಳು ಪ್ರತ್ಯಕ್ಷವಾಗಿವೆ. ಇದು ಇಲ್ಲಿನ ದಾರಿಯಲ್ಲಿ ನಡೆದುಕೊಂಡು ಹೋಗುವ ಜನರಲ್ಲಿ ತೀವ್ರ ಭಯವನ್ನುಂಟು ಮಾಡಿದೆ.
إرسال تعليق