ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿಡಿಲು ಬಡಿದು ಮನೆಗೆ ಹಾನಿ

ಸಿಡಿಲು ಬಡಿದು ಮನೆಗೆ ಹಾನಿ

 


ಉತ್ತರ ಕನ್ನಡ: ನಿನ್ನೆ ತಡರಾತ್ರಿ ಗುಡುಗು ಸಹಿತ ಮಳೆ ಸುರಿದ ಪರಿಣಾಮ ಮನೆಯೊಂದಕ್ಕೆ ಸಿಡಿಲು ಬಡಿದು, ಸಂಪೂರ್ಣವಾಗಿ ಹಾನಿಗೊಂಡಿದ್ದು, ಸದ್ಯ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಲವಳ್ಳಿ ಗ್ರಾಮದ ನಾಗರಾಜ ಮಡಿವಾಳ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಮನೆಯ ಹಂಚುಗಳೆಲ್ಲಾ ಸಂಪೂರ್ಣವಾಗಿ ಹಾನಿಗೊಂಡಿವೆ.

ಮನೆಯಲ್ಲಿದ್ದಂತ ಟಿವಿ, ಫ್ರಿಡ್ಜ್ ಸೇರಿದಂತೆ ಅನೇಕ ವಸ್ತುಗಳು ಸಂಪೂರ್ಣವಾಗಿ ಸಿಡಿಲು ಬಡಿತದಿಂದ ಹಾನಿಗೊಂಡಿವೆ.


ಮನೆಗೆ ಸಿಡಿಲು ಬಡಿದ ವೇಳೆಗೆ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಸಿಡಿಲಿನ ಹೊಡೆತಕ್ಕೆ ಮನೆಯೆಲ್ಲಾ ನಾಶವಾದರೂ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.


0 تعليقات

إرسال تعليق

Post a Comment (0)

أحدث أقدم