ಪುತ್ತೂರು: ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ತಾಲೂಕು ಯುವ ಜನ ಒಕ್ಕೂಟ(ರಿ) ಪುತ್ತೂರು, ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇದರ ಸಹಯೋಗದೊಂದಿಗೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಕಾರ್ಯಕ್ರಮವು ನವೆಂಬರ್ 19 ರಂದು ಸಂತ ಫಿಲೋಮಿನಾ ಕಾಲೇಜು ಸಿಲ್ವರ್ ಜುಬಿಲಿ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಯುವ ಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂತಫಿಲೋಮಿನಾ ಕಾಲೇಜು ಪ್ರಾಂಶಪಾಲರಾದ ಲಿಯೋನೊರೊನ್ನಾ, ಮುಖ್ಯ ಅತಿಥಿಯಾಗಿ ಆಗಮಿಸಿದ ನೆಹರು ಯುವ ಕೇಂದ್ರ ಮಂಗಳೂರು ಜಿಲ್ಲಾ ಯುವ ಅಧಿಕಾರಿ ರಘವೀರ್ ಸೂಟರ್ ಪೇಟೆ ಮಾತಾನಾಡಿ ಭಾಷಣ ಸ್ಪರ್ಧೆಯ ಬಗ್ಗೆ ವಿವರಣೆ ನೀಡಿದರು.
ಶ್ರೀಕಾಂತ್ ಪೂಜಾರಿ ಬಿರಾವು ಜಿಲ್ಲಾ ಯುವ ಸಮಾಲೋಚಕರು, ಯುವ ಸ್ಪಂದನ ಕೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ , ಡಾ. ಚಂದ್ರಶೇಖರ್ ಸಹ ಪ್ರಾಧ್ಯಾಪಕರು, ಭೌತಶಾಸ್ತ್ರ ವಿಭಾಗ ಸಂತಫಿಲೋಮಿನಾ ಕಾಲೇಜು ಪುತ್ತೂರು ಇವರು ಸಂದರ್ಭೋಚಿತವಾಗಿ ಮಾತಾನಾಡಿದರು.
ತಾಲೂಕು ಸಂಯೋಜಕಿ ಪ್ರಜ್ಞಾ ಕುಲಾಲ್ ಸ್ವಾಗತಿಸಿದರು, ವಿದ್ಯಾರ್ಥಿನಿಯರಾದ ಕೃಪಾಲಿ, ಅಖಿಲಾ ಪ್ರಾರ್ಥಿಸಿದರು.
ತಾಲೂಕು ಸಂಯೋಜಕ ಗೌತಮ್ ರಾಜ್ ವಂದಿಸಿದರು, ತೃತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಚೈತ್ರರವರು ಕಾರ್ಯಕ್ರಮ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق