ಕಾಣುತ್ತಿದೆ ಹತ್ತಾರು ದೇವರಿರುವ ದೇವಾಲಯ
ಪಾಲಿಸುತ್ತಿದೆ ಭಾರತೀಯ ಸಂಪ್ರದಾಯ
ಎಲ್ಲರೂ ಪೂಜಿಸುವರು ಇಲ್ಲಿ ಸರಸ್ವತಿ ಮಾತೆಯ
ಅದುವೇ ಕಲ್ಲಡ್ಕ ಶ್ರೀರಾಮ ಮಹಾವಿದ್ಯಾಲಯ||
ಸುತ್ತಲೂ ಹಚ್ಚ ಹಸುರಿನ ಪರಿಸರ
ಎಲ್ಲರಿಂದಲೂ ಪಡೆಯುತ್ತಿದೆ ಲಕ್ಷ ಲಕ್ಷ ನಮಸ್ಕಾರ
ವಿದ್ಯೆ, ಶಿಸ್ತು, ತಾಳ್ಮೆಯನ್ನು ಕಲಿಸುವ ವಿದ್ಯಾಲಯ
ಕಾಣಬಹುದು ಇಲ್ಲಿ ಸುಸಜ್ಜಿತ ಗ್ರಂಥಾಲಯ||
ಬೆಳಗುತ್ತಿದೆ ಇಲ್ಲಿಂದ ನೂರಾರು ಜ್ಯೋತಿ
ಹಲವಾರು ವಿದ್ಯಾರ್ಥಿಗಳು ಸಾಧನೆ ಮಾಡಿಹರು ವಿಶ್ವವ್ಯಾಪಿ
ಸಾಕಾಗದು ಈ ವಿದ್ಯಾಕೇಂದ್ರಕ್ಕೆ ನೂರಾರು ನಮನ
ಆಗುತ್ತಿದೆ ಅವಿದ್ಯೆ ಎಂಬ ರೋಗ ಶಮನ||
ಎತ್ತ ನೋಡಿದರೂ ರಾಮಾಯಣ_ ಮಹಾಭಾರತ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು
ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಸದಾಕಾಲ ಶ್ರಮಿಸುವ ಗುರುವೃಂದದವರು
ಅಚ್ಚುಕಟ್ಟಾಗಿ ನಡೆಯುವ ಬೆಳ್ಳಗ್ಗಿನ ಸರಸ್ವತಿ ವಂದನ
ಅದ ನೋಡಲು ಸಾಲದು ಎರಡು ನಯನ||
ನೀಡುವರು ಶಿಕ್ಷಣದ ಜೊತೆಗೆ ಸಂಸ್ಕೃತಿ ಗೆ ಪಾಶಸ್ತ್ಯ
ಇದು ಇಂದಿನ ಶಿಕ್ಷಣದಲ್ಲಿ ಬಹಳ ಅಗತ್ಯ
ವಿವಿಧ ಕಾರ್ಯಕ್ರಮಗಳು ನಡೆಯುವುದು ಪ್ರತಿದಿನ
ಇದರಿಂದ ಹೆಚ್ಚಾಗುವುದು ನಮ್ಮ ಜ್ಞಾನ||
ಹಿರಿಯರಲ್ಲಿರುವ ತಾಳ್ಮೆ, ವಿಧೇಯತೆಯೇ ಎಲ್ಲರಿಗೂ ಸ್ಪೂರ್ತಿ
ರಾಷ್ಟಾದಂತ್ಯ ಹಬ್ಬಲಿ ಈ ಮಹಾವಿದ್ಯಾಲಯದ ಕೀರ್ತಿ
ಚಿರಕಾಲ ಅಭಿವೃದ್ಧಿ ಹೊಂದುತ್ತಿರಲಿ ಈ ಮಹಾವಿದ್ಯಾಲಯ
ಸದಾ ಇರಲಿ ಈ ವಿದ್ಯಾಸಂಸ್ಥೆಯ ಮೇಲೆ ಶ್ರೀ ರಾಮನ ಆಶೀರ್ವಾದ||
✍️ಸಂಧ್ಯಾ ಕುಮಾರಿ ಎಸ್, ವಿಟ್ಲ
ಅರ್ಥಶಾಸ್ತ್ರ ಉಪನ್ಯಾಸಕಿ,
ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ
إرسال تعليق