ಮಂಗಳೂರು: ನರಿಮೊಗರು ಪ್ರಾರ್ಥಮಿಕ ಕೃಷಿ ಸಂಘ (Primary Agriculture Co-operative Society) ನರಿಮೊಗರು, ಪುತ್ತೂರು, ಇದರ ಅಧ್ಯಕ್ಷರಾದ ಶ್ರೀ ರತ್ನಾಕರ ವಾರಂಬಳ್ಳಿತ್ತಾಯ ಅವರನ್ನು ಶಿವಳ್ಳಿ ಸಂಪದದ ವತಿಯಿಂದ 2020-21 ನೇ ಸಾಲಿನ ವಷದ ಹಿರಿಯ ಸದಸ್ಯರು ಎಂದು ಗುರುತಿಸಿ ವರ್ಷದ ಮಹಾಸಭೆಯಲ್ಲಿ ಹಾಗೂ ಹಿರಿಯರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪಂಜಿಗ, ಶಾಂತಿಗೋಡು ನಿವಾಸಿಯಾಗಿರುವ ವಾರಂಬಳ್ಳಿತ್ತಾಯರು ಮೃದು ಸ್ವಭಾವದ ಹಿರಿಯ ಕೃಷಿಕ, ಸಾಮಾಜಿಕ ಕಳಕಳಿಯ ಚಿಂತನಾಶೀಲ, ಸಮಾಜ ಸ್ನೇಹಿ ವ್ಯಕ್ತಿತ್ವದವರು. ಮರಕ್ಕೂರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರು ಹಾಗೂ ಶಿವಳ್ಳಿ ಸಂಪದ ನರಿಮೊಗರು ವಲಯದ ಸದಸ್ಯರಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಉಳಿದ ಹಿರಿಯರ ಉಪಸ್ಥಿತರಿದ್ದರು.
ಇವರು ಶಿವಳ್ಳಿ ಸ್ಪಂದನ ದೇರೇಬೈಲು ವಲಯದ ಖಜಾಂಚಿ, ವಿಪ್ರ ಸಮೂಹ ಕೊಂಚಾಡಿ, ಮಾಂಡೋವಿ ಮೋಟಾರ್ ಸಂಸ್ಥೆಯ ಉದ್ಯೋಗಿ ಅಶೋಕ ಕುಮಾರ್ ಅವರ ತಂದೆಯವರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق