ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುಂದಾಪುರ: 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಸಿದ ಬಿ.ಬಿ ಹೆಗ್ಡೆ ಕಾಲೇಜು

ಕುಂದಾಪುರ: 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಸಿದ ಬಿ.ಬಿ ಹೆಗ್ಡೆ ಕಾಲೇಜು



ಕರೋನಾ ಎಂಬುದರ ಕರಾಳತೆ ಅನೇಕ ಮನೆಗಳನ್ನು ಕಂಗಾಲಾಗಿಸಿದೆ. 'ಮನೆಯಲ್ಲಿ ಕಷ್ಟ ಇದೆ ಸಾರ್, ಓದೋದು ಸ್ಟಾಪ್ ಮಾಡೋಣ ಅಂತಿದ್ದೇನೆ'. ಅಪ್ಪನಿಗೆ ದುಡಿಮೆ ಇಲ್ಲದೆ ಒಂದು ವರ್ಷ ಆಯ್ತು ಸಾರ್' -  ಹೀಗೆ ಹೇಳುವ ಅನೇಕರ ಮಾರ್ಕ್ಸ್ ಎಪ್ಪತ್ತರ ಮೇಲಿರುತ್ತಿತ್ತು‌. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ‌. ಕೆ. ಉಮೇಶ್ ಶೆಟ್ಟಿಯವರ ಪರಿಕಲ್ಪನೆಯಲ್ಲಿ ವಿನೂತನ ಸಾಹಸವೊಂದಕ್ಕೆ ಮುನ್ನಡಿಯಿಟ್ಟರು. ಇಂತಹ ವಿದ್ಯಾರ್ಥಿಗಳ ಸಂಕಷ್ಟವನ್ನು ಈ ಸಮಾಜದ ಹೃದಯ ಶ್ರೀಮಂತಿಕೆಯ ಶ್ರೀಮಂತರ ಮುಂದಿಟ್ಟರು. ಅವರೆಲ್ಲರೂ, ಸರಿ ನಾನೊಬ್ಬರನ್ನು ದತ್ತು ಪಡೆಯುತ್ತೇನೆ ಎಂದರು‌. 


ಪ್ರಾಂಶುಪಾಲರ ಮೊದಲ ಪ್ರಯತ್ನಕ್ಕೆ ಒಟ್ಟು ಹದಿನೈದು ದಾನಿಗಳು ಸ್ಪಂದಿಸಿದ್ದಾರೆ‌‌. ತನ್ಮೂಲಕ ಇಪ್ಪತ್ತು ವಿದ್ಯಾರ್ಥಿಗಳು ಮೂರು ವರ್ಷಗಳ ಉಚಿತ ಪದವಿ ಶಿಕ್ಷಣವನ್ನು ಪಡೆಯಲಿದ್ದಾರೆ!! ಮೊನ್ನೆಯಷ್ಟೆ ಮತ್ತೊಬ್ಬರು ಮಹಾನ್ ದಾನಿಗಳು ಐದು ಪದವಿ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುತ್ತೇನೆಂದು ತಿಳಿಸಿದ್ದಾರೆ.‌ ಗ್ರೇಟ್‌ !!. ಈ ಕಾಲಘಟ್ಟದಲ್ಲಿ ಇದಕ್ಕಿಂತ ಶ್ರೇಷ್ಠವಾದ ದಾನ ಇನ್ಯಾವುದು ಇದೆ‌‌, ಹೇಳಿ.


ಅತ್ಯುತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಇಂತಹ ಕಾಳಜಿ, ಶ್ರೇಷ್ಠ ಶಿಕ್ಷಣ ಸಂಸ್ಥೆಯಿಂದ ಮಾತ್ರ ಸಾಧ್ಯ. ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾಗಬೇಕು ಎಂಬ ಬಿ.ಎಂ. ಸುಕುಮಾರ ಶೆಟ್ಟಿಯವರ ಮಾತುಗಳು ಇಲ್ಲಿ ಅಕ್ಷರಶಃ ಅನುಷ್ಠಾನಗೊಳ್ಳುತ್ತಿದೆ. ಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಯಿದ್ದರೆ ನಮ್ಮ ಗಮನಕ್ಕೆ ತನ್ನಿ, ಅವರ ಶಿಕ್ಷಣಕ್ಕೆ ನಾವಿದ್ದೇವೆ ಎನ್ನುವ ಭರವಸೆ ಬಿ.ಬಿ. ಹೆಗ್ಡೆ ಕಾಲೇಜು ಮಾತ್ರ ನೀಡಬಲ್ಲದು.


ಚಿತ್ರ : ಬನ್ನಾಡಿಯ ದಿನಕರ ಶೆಟ್ಟಿಯವರು ಒಬ್ಬ ವಿದ್ಯಾರ್ಥಿಯನ್ನು ದತ್ತು ಪಡೆದು, ಶಿಕ್ಷಣ ಶುಲ್ಕವನ್ನು ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿಯವರಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿಗೆ ಅವರನ್ನು ದತ್ತು ಪಡೆದವರ ಪರಿಚಯ, ದಾನಿಗಳಿಗೆ ವಿದ್ಯಾರ್ಥಿಯ ಪರಿಚಯ ಮೂರು ವರ್ಷ ಇರುವುದಿಲ್ಲ. ಹೀಗೆ ಸುಪ್ತವಾಗಿದ್ದುಕೊಂಡೆ ಪ್ರೋತ್ಸಾಹಿಸುವ ಇಂತವರನೇಕರಿಗೆ ನಮ್ಮೊಂದು ಚಪ್ಪಾಳೆ.‌

- ನಾಗರಾಜ್ ನೈಕಂಬ್ಳಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم