ಕುಷ್ಟಗಿ: ಜಲಪಾತ ನೋಡಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ಕುಷ್ಟಗಿ ತಾಲೂಕಿನ ಕಬ್ವರಗಿಯ ಕಪಿಲತೀರ್ಥದಲ್ಲಿ ನಡೆದಿದೆ. ಮೃತ ವ್ಯಕ್ತಿ ಹುಲಗಪ್ಪ ನಾಗಪ್ಪ ವಡ್ಡರ (27 ವರ್ಷ) ಎಂದು ಗುರುತಿಸಲಾಗಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕಲ್ಲೂರು ನಿವಾಸಿಯಾಗಿದ್ದು , ಯಲಬುರ್ಗಾ ತಾಲೂಕು ಮುಧೋಳ ಗ್ರಾಮದಲ್ಲಿ ವಾಸವಾಗಿದ್ದರು.
ಪತ್ನಿ ಭಾಗ್ಯ, ಮಗಳು ಹನುಮಸಾಗರದ ದೊಡ್ಡಮ್ಮನ ಮನೆಗೆ ಹೋಗಿದ್ದು, ಈ ಸಮಯದಲ್ಲಿ ಕುಟುಂಬ ಸಮೇತರಾಗಿ ಕಬ್ಬರಗಿ ಕಪಿಲತೀರ್ಥ ಜಲಪಾತಕ್ಕೆ ತೆರಳಿದ್ದರು. ಜಲಪಾತ ನೀರು ಬೀಳುವ ಸ್ಥಳದಲ್ಲಿ ನೀರು ಕುಡಿಯಲು ಹೋಗಿದ್ದಾಗ, ಮೂರ್ಛೆ ರೋಗ ಬಂದು ಜಾರಿ ಬಿದ್ದಿದ್ದರಿಂದ ಚೂಪಾದ ಕಲ್ಲು ತಲೆಗೆ ತಾಗಿ ಗಂಭೀರ ಗಾಯಗೊಂಡಿದ್ದರು.
ಕೂಡಲೇ ಹನುಮ ಜಲಪಾತ ನೋಡಲು ಹೋಗಿ ಜಾರಿ ಬಿದ್ದು , ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮದ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ.
ಮೃತ ಹುಲಗಪ್ಪ ಪತ್ನಿ ಭಾಗ್ಯ ದೂರು ನೀಡಿದ್ದು, ಹನುಮ ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸೈ ಅಶೋಕ ಬೇವೂರು ಮಾಹಿತಿ ನೀಡಿದರು.
إرسال تعليق