ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವೀಣಾವಾದಿನಿ ಸಂಗೀತ ವಿದ್ಯಾಪೀಠಮ್ ವತಿಯಿಂದ 'ಗಾನಮಾಧುರಿ' ವಿಶೇಷ ಸಂಗೀತ ಕಾರ್ಯಕ್ರಮ

ವೀಣಾವಾದಿನಿ ಸಂಗೀತ ವಿದ್ಯಾಪೀಠಮ್ ವತಿಯಿಂದ 'ಗಾನಮಾಧುರಿ' ವಿಶೇಷ ಸಂಗೀತ ಕಾರ್ಯಕ್ರಮ



ಮಂಗಳೂರು: ಕಾಸರಗೋಡಿನ ಬಳ್ಳಪದವಿನಲ್ಲಿರುವ 'ವೀಣಾವಾದಿನಿ ಸಂಗೀತ ವಿದ್ಯಾಪೀಠಮ್' ವತಿಯಿಂದ ಕಳೆದ ಎಂಟು ವರ್ಷಗಳಿಂದ ಬಳ್ಳಪದವಿನಲ್ಲಿ ಸತತವಾಗಿ ಪ್ರತೀವರ್ಷ 'ಶ್ರೀಚಕ್ರ ನವಾವರಣ ಪೂಜೆ' ನಡೆಯುತ್ತಿದ್ದು, ಈ ಒಂಬತ್ತನೆಯ ವರ್ಷ- ಅಂದರೆ, ಫೆಬ್ರವರಿಯಲ್ಲಿ ನಡೆಯುವ ಮೂರು ದಿನಗಳ ವಾರ್ಷಿಕೋತ್ಸವ ಸಂದರ್ಭದಲ್ಲಿ ವಿಶೇಷವಾದ ಮತ್ತು ಅಪರೂಪವಾದ 'ಶ್ರೀಚಕ್ರ ಪ್ರತಿಷ್ಠಾಪನೆ' ಜರಗಲಿದೆ.


ಅದರ ಅಂಗವಾಗಿ ಮೂರು ತಿಂಗಳು ಪ್ರತೀ ಪೌರ್ಣಮಿಯ ದಿನ ಮೂರು ದೇವೀ ದೇವಸ್ಥಾನಗಳಲ್ಲಿ 'ಗಾನಮಾಧುರಿ' ಎಂಬ ಸಂಗೀತ ಸೇವೆಯನ್ನು ಗಾನಪ್ರವೀಣ ಯೋಗೀಶ ಶರ್ಮ ಬಳ್ಳಪದವು ಅವರು ನಡೆಸಿಕೊಡುತ್ತಿದ್ದು, ಮೊದಲ ಪೌರ್ಣಮಿ ಕಾರ್ಯಕ್ರಮವು ಶುಕ್ರವಾರ, ನವಂಬರ್ ದಿನಾಂಕ 19ರಂದು ಉರ್ವ ಮಾರಿಗುಡಿಯಲ್ಲಿ ಜರಗಿತು.


ಪಕ್ಕವಾದ್ಯದಲ್ಲಿ ಮಾಂಜೂರು ರಂಜಿತ್ (ವಯಲಿನ್), ವೈಕಮ್ ಪ್ರಸಾದ್ (ಮೃದಂಗ), ಮಾಂಜೂರು ಉಣ್ಣಿಕೃಷ್ಣನ್ (ಘಟಮ್) ಮತ್ತು ಪಯ್ಯನ್ನೂರು ಗೋವಿಂದಪ್ರಸಾದ್ (ಮೋರ್ಸಿಂಗ್) ಸಹಕಾರ ನೀಡಿದರು.


ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಶ್ಚಂದ್ರ ಕರ್ಕೇರ ಬೈಕಂಪಾಡಿ ದೇವಸ್ಥಾನದ ವತಿಯಿಂದ ಕಲಾವಿದರನ್ನು ಗೌರವಿಸಿದರು. ಸದಸ್ಯರಾದ ಬೋಳೂರಿನ ಜಯರಾಜ ಗುರಿಕ್ಕಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಉಪನ್ಯಾಸಕಿ ಅಮೃತಾ ಓಟೆಕ್ಕಾಟು ಸ್ವಾಗತಿಸಿದರು. ಹಠಯೋಗ ಶಿಕ್ಷಕ ಪ್ರವೀಣ್ ಕುಮಾರ್ ನಿರ್ವಹಿಸಿದರು. ಡಾ. ವಸಂತಕುಮಾರ ಪೆರ್ಲ ವಂದಿಸಿದರು.


ಅಧಿಕ ಸಂಖ್ಯೆಯಲ್ಲಿದ್ದ ಪ್ರೇಕ್ಷಕರು 'ಗಾನಮಾಧುರಿ' ಸಂಗೀತ ಕಚೇರಿಯನ್ನು ಆಸ್ವಾದಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم