ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೇಲಿಯ ತಂತಿ ಸ್ಪರ್ಶಿಸಿ ಆನೆ ಸಾವು

ಬೇಲಿಯ ತಂತಿ ಸ್ಪರ್ಶಿಸಿ ಆನೆ ಸಾವು

 


ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ನಂದಿಬಟ್ಟಲಿನ ಹೊಲದಲ್ಲಿ ವಿದ್ಯುತ್‌ ಹರಿಸಿದ್ದ ಬೇಲಿಯ ತಂತಿ ಸ್ಪರ್ಶಿಸಿ ಗಂಡಾನೆ ಮೃತಪಟ್ಟ ಘಟನೆಯೊಂದು ನಡೆಯಿತು.


ಭದ್ರಾ ಅಭಯಾರಣ್ಯದ ತಣಿಗೆಬೈಲು ವ್ಯಾಪ್ತಿಯ ಕಾಡಂಚಿನ ಜಮೀನಿನಲ್ಲಿ ಅವಘಡ ಸಂಭವಿಸಿದ್ದು, ಶುಕ್ರವಾರ ರಾತ್ರಿ ಸುಮಾರು 30 ವರ್ಷದ ಆನೆ ಮೃತಪಟ್ಟಿದೆ ಎಂದು ಭದ್ರಾ ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಭಾಕರ್‌ ತಿಳಿಸಿದರು.

ಡಾ.ಯಶಸ್‌ ಒಡೆಯರ್‌ ಮತ್ತು ತಂಡದವರು ಮರಣೋತ್ತರ ಪರೀಕ್ಷೆ ನಡೆಸಿ, ಎಸಿಎಫ್‌ ರತ್ನಪ್ರಭಾ, ಆರ್‌ಎಫ್‌ಒ ನವೀನ್‌, ಗೌರವ ವನ್ಯಜೀವಿ ಪರಿಪಾಲಕ ವೀರೇಶ್‌ ಇದ್ದರು.


ಜಮೀನುದಾರ ಪರಮೇಶರಪ್ಪ ವಿರುದ್ಧ ದೂರು ದಾಖಲಾಗಿದೆ.

ಆರೋಪಿ ತಲೆಮರೆಸಿಕೊಂಡಿದ್ದಾರೆಂದು ಲಿಂಗದಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم